28.2 C
Udupi
Thursday, April 30, 2026
spot_img
spot_img
HomeBlogಮೀಸಲಾತಿಯ ಲಾಭ ಪಡೆಯಲು ಮರುಮತಾಂತರವಾಗುವುದು ಸಂವಿಧಾನಕ್ಕೆ ಮಾಡುವ ವಂಚನೆ: ಸುಪ್ರೀಂ ಕೋರ್ಟ್

ಮೀಸಲಾತಿಯ ಲಾಭ ಪಡೆಯಲು ಮರುಮತಾಂತರವಾಗುವುದು ಸಂವಿಧಾನಕ್ಕೆ ಮಾಡುವ ವಂಚನೆ: ಸುಪ್ರೀಂ ಕೋರ್ಟ್

ನವದೆಹಲಿ: ತಮಿಳುನಾಡಿನ ಮಹಿಳೆಯೊಬ್ಬರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು ಇದೀಗ ದಲಿತ ಮೀಸಲಾತಿಯ ಲಾಭ ಪಡೆಯಲು ತನ್ನನ್ನು ತಾನು ಹಿಂದೂ ಧರ್ಮೀಯಳು ಎಂದು ಹೇಳಿಕೊಂಡಿದ್ದನ್ನು ಸುಪ್ರೀಂ ಕೋರ್ಟ್ ಬಲವಾಗಿ ಖಂಡಿಸಿ ಮೀಸಲಾತಿ ಸೌಲಭ್ಯ ಪಡೆಯಲು ಮತಾಂತರ ಇಲ್ಲವೇ ಮರು ಮತಾಂತರ ಆಗುವುದು ಸಂವಿಧಾನಕ್ಕೆ ಮಾಡಿದ ವಂಚನೆ ಆಗುತ್ತದೆ ಎಂದು ಹೇಳಿದೆ.

ನ್ಯಾ. ಪಂಕಜ್ ಮಿತ್ತಲ್, ಆರ್ ಮಹದೇವನ್ ಅವರಿದ್ದ ಪೀಠವು ಈ ರೀತಿ ಮೀಸಲಾತಿ ಎಲ್ಲರು ಪಡೆಯಲು ಮರುಮತಂತರವಾಗುವುದು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವ ಆಶಯಕ್ಕೆ ಧಕ್ಕೆ ತಂದತೆ ಆಗುತ್ತದೆ. ಇದಕ್ಕೆ ಅನುಮತಿ ನೀಡಲಾಗದು ಎಂದು ಸ್ಪಷ್ಟನೆ ನೀಡಿದೆ.

ಪ್ರಕರಣದ ಹಿನ್ನೆಲೆ:

ಸೆಲ್ವಮಣಿ ಎನ್ನುವವರು, ತಾನು ಹಿಂದೂ ಧರ್ಮದ ವಳ್ಳುವನ್ ಜಾತಿಗೆ ಸೇರಿದ್ದೇನೆ. ಎಸ್‌ಸಿ ಮೀಸಲಾತಿ ಅಡಿ ಗುಮಾಸ್ತ ಹುದ್ದೆ ನೀಡಿ ಎಂದು ಮನವಿ ಮಾಡಿದ್ದರು. ಈ ಮನವಿಯನ್ನು ತಮಿಳುನಾಡು ಸರ್ಕಾರ, ಹೈಕೋರ್ಟ್ ತಿರಸ್ಕರಿಸಿತ್ತು. ಹೀಗಾಗಿ ಈ ಪ್ರಕರಣ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page