26.3 C
Udupi
Wednesday, May 6, 2026
spot_img
spot_img
HomeBlogಮಹಾಕುಂಭಮೇಳದಲ್ಲಿ ಅಮಾವಾಸ್ಯೆಯ ದಿನ ಕಾಲ್ತುಳಿತಕ್ಕೆ 10 ಮಂದಿ ಬಲಿ

ಮಹಾಕುಂಭಮೇಳದಲ್ಲಿ ಅಮಾವಾಸ್ಯೆಯ ದಿನ ಕಾಲ್ತುಳಿತಕ್ಕೆ 10 ಮಂದಿ ಬಲಿ

ಲಕ್ನೋ: 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳದಲ್ಲಿ ಮಂಗಳವಾರ ಮಧ್ಯರಾತ್ರಿ ಕಾಲ್ತುಳಿತ ಸಂಭವಿಸಿ ಕನಿಷ್ಠ 10ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದರಿಂದ ಈ ದುರ್ಘಟನೆ ಸಂಭವಿಸಿದ್ದು ಇದರ ಪರಿಣಾಮ ಎರಡನೇ ಅಮೃತ ಸ್ಥಾನವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ದೇಶದೆಲ್ಲೆಡೆಯಿಂದ ಆಗಮಿಸಿದ್ದ ಭಕ್ತರು ಪುಣ್ಯ ಸ್ನಾನಕ್ಕಾಗಿ ರಾತ್ರಿಯಿಂದಲೇ ನಿದ್ದೆ ಬಿಟ್ಟು ಕಾದು ಕುಳಿತಿದ್ದು ನಡುರಾತ್ರಿಯ ಬಳಿಕ ಬ್ಯಾರಿಕೆಡ್ ಗಳನ್ನು ತೆಗೆದಾಗ ಲಕ್ಷಾಂತರ ಜನರು ಏಕಕಾಲಕ್ಕೆ ನುಗ್ಗಿ ತಳ್ಳಾಡಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಈ ಘಟನೆಯಿಂದ ಹಲವಾರು ಮಂದಿ ಗಾಯಗೊಂಡಿದ್ದು ಆಂಬುಲೆನ್ಸ್ ಗಳು ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಗೊಂಡವರನ್ನು ಸ್ಥಳಿಯ ಆಸ್ಪತ್ರೆಗೆ ರವಾನಿಸಲಾಗಿದೆ.

ಸೇನಾ ಪಡೆ, ಹೆಚ್ಚುವರಿ ಪೊಲೀಸರು, ಅರೆ ಸೈನಿಕರು ಅಗ್ನಿಶಾಮಕ ದಳ ಸಿಬ್ಬಂದಿಗಳು ಎಷ್ಟೇ ಕ್ರಮಗಳನ್ನು ಕೈಗೊಂಡರು ಸುವ್ಯವಸ್ಥೆಯ ಹೊರತಾಗಿಯೂ ಜನರು ಆತುರ ತೋರಿದ್ದರಿಂದ ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page