ಮುನ್ನೆಚ್ಚರಿಕೆ ಕ್ರಮವಾಗಿ 10 ಅಡಿ ಎತ್ತರದ ತಡೆಬೇಲಿ

ಮಲ್ಪೆ: ಕರಾವಳಿಯಲ್ಲಿ ಮುಂಗಾರು ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರ ಉಗ್ರ ರೂಪ ತಾಳಿದ್ದು, ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಈ ಹಿನ್ನೆಲೆ ಉಡುಪಿ ಜಿಲ್ಲೆಯ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ಸಮುದ್ರಕ್ಕಿಳಿಯುವುದನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.
ಸಮುದ್ರದ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಸುರಕ್ಷತಾ ಕ್ರಮವಾಗಿ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ 10 ಅಡಿ ಎತ್ತರದ ತಡೆಬೇಲಿ ಅಳವಡಿಸಲಾಗಿದೆ. ಅಪಾಯ ಸೂಚಿಸುವ ಬಾವುಟಗಳು ಹಾಗೂ ಎಚ್ಚರಿಕೆ ಫಲಕಗಳನ್ನು ಕೂಡ ಸ್ಥಾಪಿಸಲಾಗಿದೆ.
ಸೆಪ್ಟೆಂಬರ್ 15ರವರೆಗೆ ಸಮುದ್ರಕ್ಕಿಳಿಯುವುದಕ್ಕೆ ನಿಷೇಧ ಜಾರಿಯಲ್ಲಿರಲಿದೆ. ನಿಯಮ ಉಲ್ಲಂಘನೆ ತಡೆಯಲು ಟೂರಿಸ್ಟ್ ಪೊಲೀಸ್, ಲೈಫ್‌ಗಾರ್ಡ್ ಹಾಗೂ ಪೊಲೀಸ್ ಹೋಮ್‌ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಿ ಬೀಚ್ ಪ್ರದೇಶದಲ್ಲಿ ನಿರಂತರ ನಿಗಾವಹಿಸಲಾಗಿದೆ.
































