ಕಥೆ (ಭಾಗ- 30)
ಚೇತನ್ ವರ್ಕಾಡಿ

ಮುಂದಿನ ವಾರ ಊರಿಗೆ ಬರುವುದಾಗಿ ಪ್ರತಾಪ್ ತಿಳಿಸಿದಾಗ ಮಿಥುನ್‌ನ ಸಂತೋಷಕ್ಕೆ ಪಾರವೆ ಇರಲಿಲ್ಲ!ಹೌದು ಅದಕ್ಕೂ ಕಾರಣವಿದೆ.ಪ್ರತಾಪ್ ಹೆಸರಿಗೆ ಮಾತ್ರ ಡಾಕ್ಟರ್ ಆಗಿರಲಿಲ್ಲ!ಯಾವುದೆ ಒಂದು ರೋಗಿಯನ್ನು ಮುಟ್ಟಿದನೆಂದರೆ ಅವನ ಕೈಯಿಂದ ಗುಣವಾಗದೆ ಇದ್ದ ರೋಗಿಗಳೆ ಅತಿ ವಿರಳ.ಆತನ ಕೈ ಗುಣವೊ ತಿಳಿಯದು!ಅಂತು ವೈದ್ಯಲೋಕದಲ್ಲೇ ಚಮತ್ಕಾರವನ್ನೆ ಸೃಷ್ಟಿಸಿದ ಡಾಕ್ಟರ್ ಅವನಾಗಿದ್ದ.ಪ್ರತಾಪ್ ಬರುವ ವಿಷಯ ತಿಳಿದ ಮಿಥುನ್ ಮೊದಲಾಗಿ ಮಧುವಿನ ತಾಯಿ ತಂದೆಗೆ ಈ ವಿಚಾರ ತಿಳಿಸಿದ.ಅವರಿಗು ಮಿಥುನ್‌ನ ಮಾತುಗಳನ್ನು ಕೇಳಿದಾಗ ಮಧು ಗುಣಮುಖ ಆಗಿಯೆಬಿಟ್ಟ ಅನ್ನೊ ಸಂತೋಷ ಮುಖವನ್ನು ಆವರಿಸಿತು..
ದಿನಗಳೆರಡು ಕಳೆಯಿತು, ಅಮೇರಿಕಾದಿಂದ ಹಾರಿಬಂದ ಪ್ರತಾಪ್ ನೇರವಾಗಿ ಬೆಂಗಳೂರಿಗೆ ಬಂದಿಳಿದ.ತನ್ನ ಆತ್ಮೀಯ ಗೆಳೆಯನನ್ನು ತವರಿಗೆ ಸ್ವಾಗತಿಸಿದ ಮಿಥುನ್ ಅಲ್ಲಿಂದಲೇ ತನ್ನ ಕಾರಿನಿಂದಲೇ ನೇರವಾಗಿ ತನ್ನ ಗೆಳೆಯನ ಮನೆಗೆ ಕರೆತಂದ.ಡಾ!ಪ್ರತಾಪ್ ಕಾರಿನಿಂದ ಇಳಿಯುತ್ತಿದ್ದಂತೆಯೆ ಸುಗಂಧಿ ಮತ್ತು ಸೋಮಶೇಖರರಾಯರು ತಮ್ಮ ಎರಡು ಹಸ್ತಗಳನ್ನು ಜೋಡಿಸಿ ಸ್ವಾಗತಿಸಿದಾಗ!ಒಬ್ಬ ಡಾಕ್ಟರ್ ಆಗಿ ಹೆತ್ತ ಕರುಳಿನ ನೋವು ಪ್ರತಾಪ್‌ನಿಗೆ ಅರಿಯಿತು.ಅಂಗಳದಲ್ಲಿದ್ದ ಡಾಕ್ಟರ್ ಪ್ರತಾಪ್ ಮತ್ತು ಮಿಥುನ್‌ನನ್ನು ಒಳಗಡೆಯಿಂದ ಇಣುಕಿ ನೋಡುತ್ತಿದ್ದ ಮಂಗಳಳನ್ನು ನೋಡಿದ ಮಿಥುನ್ ತನ್ನ ಮನದರಸಿಯತ್ತ ಒಂದು ಕಿರುನಗೆಯನ್ನು ಬೀರಿದ! ಪ್ರತ್ಯುತ್ತರ ನೀಡಿದ ಮಂಗಳ ಮುದ್ದು ಮುಖದೊಳಗೆ ಕಿರುನಗೆಯೊಂದನ್ನು ಚೆಲ್ಲಿ ಬಿಟ್ಟವಳೆ! ಬಂದ ಅತಿಥಿಗಳಿಗೆ ತಂಪಾದ ಪಾನೀಯದ ವ್ಯವಸ್ಥೆ ಮಾಡೋಣವೆಂದು ಅಡುಗೆ ಮನೆಯತ್ತ ನಡೆದಳು.ಪ್ರತಾಪ್ ಮನೆಯೊಳಗೆ ಬಂದವನೆ ನೇರಾ ಮಿಥುನ್‌ನಲ್ಲಿ ಮಧುವನ್ನು ತೋರಿಸಲು ಹೇಳಿದಾಗ ಮಿಥುನ್ ತನ್ನ ಆಪ್ತಮಿತ್ರನ ರೂಮಿನೊಳಗೆ ಡಾ!ಪ್ರತಾಪನ್ನು ಕರೆತಂದ..
ಪ್ರತಾಪ್‌ನಿಗೆ ಮಧುವನ್ನು ನೊಡಿದ ಕೂಡಲೆ ಆಶ್ಚರ್ಯವಾಯಿತು….?
(ಮುಂದುವರಿಯುವುದು)













