
ಮಂಗಳೂರು: ಶುಕ್ರವಾರ ಸಂಜೆ ಮಂಗಳೂರು ಹೊರವಲಯದ ಕೊಂಡಾಣ ನಿವಾಸಿಯೊಬ್ಬರು 2014ರ ಮಾಡೆಲ್ ನ ಡೆಲ್ಲಿ ರಿಜಿಸ್ಟ್ರಾರ್ ನ ಸೆಕೆಂಡ್ ಹ್ಯಾಂಡ್ ಕಾರನ್ನು 2.50 ಲಕ್ಷ ರೂಪಾಯಿಗೆ ಖರೀದಿಸಿದ್ದು ಕಾರನ್ನು ಮನೆಗೆ ಕೊಂಡೊಯ್ಯುತ್ತಿದ್ದ ವೇಳೆ ಸಂಚಾರದಲ್ಲಿದ್ದಾಗಲೇ ಧಗಧಗನೇ ಹೊತ್ತಿ ಉರಿದು ಭಸ್ಮವಾದ ಘಟನೆ ನಡೆದಿದೆ.
ಕದ್ರಿ ಪೊಲೀಸ್ ಠಾಣೆಯ ಮುಂಭಾಗ ಬರುತ್ತಿದ್ದಂತೆ ತಾಂತ್ರಿಕ ದೋಷಕ್ಕೊಳಪಟ್ಟು ಬೆಂಕಿ ಕಾಣಿಸಿಕೊಂಡಿದ್ದು ಕೂಡಲೇ ಸವಾರ ಇಳಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿಸಲು ಪ್ರಯತ್ನಿಸಿದರೂ ಅಷ್ಟರಲ್ಲಾಗಲೇ ಕಾರು ಸಂಪೂರ್ಣ ಭಸ್ಮವಾಗಿತ್ತು.



















