ಕೊಲ್ಕತ್ತಾ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣ,ಖಂಡಿಸಿ ಪ್ರತಿಭಟನೆ

ದಿನಾಂಕ 9 ಆ. 2024 ರಂದು ಕಲ್ಕತ್ತಾದ ಆರ್. ಜಿ. ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ನಿರತ 31 ವರ್ಷದ ವೈದ್ಯಯನ್ನು ಅದೇ ಆಸ್ಪತ್ರೆಯಲ್ಲಿ ಅಮಾನುಷವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಯಿತು.
ಈ ಘಟನೆಯು ಇಡೀ ದೇಶದಾದ್ಯಂತ ಆಕ್ರೋಶದ ಅಲೆಯನ್ನ ಉಂಟುಮಾಡಿದ್ದು ಸಮಾಜದ ಹಿತಕ್ಕಾಗಿ ಹಗಲು ರಾತ್ರಿ ಎನ್ನದೆ ದುಡಿಯುವ ವೈದ್ಯ ಸಮೂಹದ ಮೇಲೆ ಇದು ಭಾರಿ ಆಘಾ..ತವನ್ನು ಉಂಟುಮಾಡಿದೆ. ಈ ಘಟನೆಯ ಕುರಿತು ಅಖಿಲ ಭಾರತೀಯ ವೈದ್ಯಕೀಯ ಸಂಘವು ಆಗಸ್ಟ್ 9 ರಿಂದಲೂ ನಿರಂತರವಾಗಿ ಪ್ರತಿಭಟನೆಯಲ್ಲಿ ತೊಡಗಿದೆ. ಈ ಪ್ರತಿಭ..ಟನೆಗಳ ಮುಂದಿನ ಹೆಜ್ಜೆಯಾಗಿ ದಿನಾಂಕ 17/08/2024 ರಂದು ಶನಿವಾರ ಬೆಳಗ್ಗೆ 6 ಯಿಂದ ಮರುದಿನ ಬೆಳಗ್ಗೆ 6 ವರೆಗೆ ಇಡೀ ದೇಶದಾದ್ಯಂತ ಹೊರರೋಗಿಗಳ ಚಿಕಿತ್ಸೆ ಯನ್ನು ವೈದ್ಯ ಸಮೂಹವು ಸ್ಥಗಿತಗೊಳಿಸಲಿದೆ.
ತುರ್ತು ಚಿಕಿತ್ಸಾ ವಿಭಾಗ ಮತ್ತು ಅಪಘಾತ ವಿಭಾಗಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಭಾಗಗಳು 24 ಗಂಟೆಗಳ ಕಾಲ ವೈದ್ಯಕೀಯ ಸೇವೆ ಲಭ್ಯವಿರುವುದಿಲ್ಲ. ಇದಕ್ಕೆ ಭಾರತೀಯ ವೈದ್ಯಕೀಯ ಸಂಘ, ಕಾರ್ಕಳ ಶಾಖೆ ಸಹ ಬೆಂಬಲ ಸೂಚಿಸಿದ್ದು, ಕೆಲಸದ ಸ್ಥಳಗಳಲ್ಲಿ ವೈದ್ಯರಿಗೆ ಸೂಕ್ತ ಭದ್ರತೆ ಮತ್ತು ಕಲ್ಕತ್ತಾ ಪ್ರಕರಣದ ಅಪರಾಧಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಸಂಘದ ಅಧ್ಯಕ್ಷರಾದ ಡಾ. ಪ್ರಕಾಶ್ ಕುಮಾರ್ ಶೆಟ್ಟಿ ಮತ್ತು ಕಾರ್ಯದರ್ಶಿಯಾದ ಡಾ. ತುಷಾರ್,ಶನಿವಾರ ಬೆಳಗ್ಗೆ 6:00 ಯಿಂದ ಭಾನುವಾರ ಬೆಳಗ್ಗೆ 6:00 ವರೆಗೂ ಕಾರ್ಕಳ ದ ಎಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಮತ್ತು ಅಪಘಾತ ವಿಭಾಗಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಭಾಗಗಳು ಸ್ಥಗಿತ ಗೊಳ್ಳಲಿವೆ,ಹಾಗೂ ಇದಕ್ಕೆ ತಾಲೂಕಿನ ನಾಗರಿಕರು ಮತ್ತು ರೋಗಿಗಳು ಸಹಕರಿಸಬೇಕು ಎಂಬುದಾಗಿ ಕೇಳಿಕೊಂಡಿದ್ದಾರೆ.













