ಕಾರ್ಕಳ ಗ್ರಾಮಂತರ ಹಾಗೂ ನಗರ ಪೊಲೀಸ್ ಠಾಣೆ, ರಕ್ಷಾ ಬಂಧನ ಆಚರಣೆ

ಆಗಸ್ಟ್ 9, ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಕಾರ್ಕಳ ಮಹಿಳಾ ಮೋರ್ಚಾ ವತಿಯಿಂದ ಕಾರ್ಕಳ ಗ್ರಾಮಾಂತರ ಹಾಗೂ ನಗರ ಪೊಲೀಸ್ ಠಾಣೆಗಳಲ್ಲಿ ಪೋಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಆರತಿ ಎತ್ತಿ,ರಕ್ಷೆಯನ್ನು ಕಟ್ಟಿ, ಸಿಹಿತಿಂಡಿ ನೀಡಿ ಶುಭಹಾರೈಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷರಾದ ವಿನಯಾ ಡಿ ಬಂಗೇರ, ಪದಾಧಿಕಾರಿಗಳಾದ ಶ್ರೀಮತಿ ಪಲ್ಲವಿ , ಅಮೃತಾ ಪ್ರಭು,ಭಾರತಿ ಅಮೀನ್, ಚಂದ್ರಿಕಾ ರಾವ್ ಹಾಗೂ ನಿರೀಕ್ಷಾ ರಾಜೇಶ್ ಉಪಸ್ಥಿತರಿದ್ದರು.