ಕರಕರಿ ಫ್ರೆಂಡ್ಸ್ ಸಾರಥ್ಯದಲ್ಲಿ, ಆರ್ಥಿಕ ಸಂಕಷ್ಟದಲ್ಲಿರುವವರ ನೆರವಿಗಾಗಿ
ಹುಲಿ ವೇಷ ಕುಣಿತ ಮತ್ತು ಲೋಬಾನ ಸೇವೆ

ಬೈಲೂರು ಶ್ರೀ ಮಾರಿಯಮ್ಮ ದೇವಿಯ ಆಶೀರ್ವಾದದೊಂದಿಗೆ, ಕರಕರಿ ಫ್ರೆಂಡ್ಸ್ ಸಾರಥ್ಯದಲ್ಲಿ ಆರ್ಥಿಕ ಸಂಕಷ್ಟದಲ್ಲಿ ಇರುವವರಿಗೆ ಸಹಾಯಹಸ್ತವನ್ನು ನೀಡುವ ಉದ್ದೇಶದಿಂದ ಬೈಲೂರು ಟೈಗರ್ಸ್ ತಂಡದ ವತಿಯಿಂದ ಹುಲಿವೇಷ ಕುಣಿತ ಇದೇ ಬರುವ ಸೋಮವಾರ ಮತ್ತು ಮಂಗಳವಾರ ನಡೆಯಲಿದೆ.

ಇದರ ಪ್ರಯುಕ್ತ ಅಗಸ್ಟ್ 26 ಸೋಮವಾರ ಬೆಳಿಗ್ಗೆ 8:00ಕ್ಕೆ ಬೈಲೂರು ಶ್ರೀ ಮಾರಿಯಮ್ಮ ಸಭಾ ಭವನದಲ್ಲಿ ಲೋಬಾನ ಸೇವೆ ಮತ್ತು ಉದ್ಘಾಟನಾ ಕಾರ್ಯಕ್ರಮ ಹಾಗು ಅದ್ದೂರಿ ಹುಲಿವೇಷ ಕುಣಿತ ನೆರವೇರಲಿದೆ.
ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೈಲೂರು ಟೈಗರ್ಸ್ ತಂಡಕ್ಕೆ ಶುಭ ಹಾರೈಸಿ ಆಶೀರ್ವದಿಸಬೇಕಾಗಿ ತಂಡ ಪ್ರಕಟಣೆಯಲ್ಲಿ ತಿಳಿಸಿದೆ.















