
ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಆರ್‌ಎಸ್‌ಎಸ್ ಬಗ್ಗೆ ನನ್ನ ಮಾತು ನಿಲ್ಲಿಸಬೇಕು ಅಂದರೆ, ಬಿಜೆಪಿ ನಾಯಕರ ಮಕ್ಕಳು ಆರ್‌ಎಸ್‌ಎಸ್ ಶಾಖೆ ಸೇರಿ ರಸ್ತೆಗೆ ಬರಬೇಕು. ಎಲ್ಲಾ ಬಿಜೆಪಿ ನಾಯಕರ ಮಕ್ಕಳು ಗಣವೇಶ ಧರಿಸಿ ಗೋಮೂತ್ರ ಕುಡೀರಿ ಆಗ ನಾನು ಮಾತು ನಿಲ್ಲಿಸುತ್ತೇನೆ ಎಂದು ಸವಾಲೆಸೆದಿದ್ದಾರೆ.
ಬಿಜೆಪಿ ನಾಯಕರು ಡೈವರ್ಟ್ ಅಂತನೇ ಅಂದುಕೊಳ್ಳಲಿ ಏನಿವಾಗ? ಬೇಡಿಕೆ ಇಲ್ಲೀಗಲ್ ಇದ್ಯಾ ಬೇಡಿಕೆ ಅಸಂವಿಧಾನಿಕ ಇದ್ಯಾ? ಇವರು ಯಾಕೆ ಇಷ್ಟು ಹೆದರುತ್ತಿದ್ದಾರೆ? ಸರ್ಕಾರಿ ಆದೇಶದಲ್ಲಿ ಬಂದರೂ ಇವರ ಹೆಸರು ಇರೋದಿಲ್ಲ. ನಾವು ಆರ್‌ಎಸ್‌ಎಸ್ ಅಂತ ಹೇಳೇ ಇಲ್ಲ. ಒಂದು ಯೂನಿಫಾರ್ಮ್ ತರೋದಕ್ಕೆ ಈ ರೀತಿ ಮಾಡ್ತಾ ಇದ್ದೀವಿ. ಇವರು ಯಾಕೆ ಇಷ್ಟು ಮಾತಾಡ್ತಾ ಇದ್ದಾರೆ. ಸರ್ಕಾರ ಸರಿ ಇಲ್ಲ ಅಂದರೆ ನೀವೇ ಬೀದಿಗಿಳಿರಿ ಯಾರು ಬೇಡ ಅಂದರು. ಸಂವಿಧಾನಿಕವಾಗಿ ಬುದ್ದ ಬಸವ ಅಂಬೇಡ್ಕರ್ ತತ್ವ ತರಲು ಹೊರಟಿದ್ದೇವೆ ಅಷ್ಟೆ. ಪ್ರಬುದ್ಧ ಸಮಾಜ ನಿರ್ಮಾಣ ಮಾಡಲು ನಾವು ಹೊರಟಿದ್ದೇವೆ. ಪ್ರಬುದ್ದ ಸಮಾಜ ಇದ್ದರೆ ಸಮೃದ್ಧ ಸಮಾ ಇರಲಿದೆ. ಇದಕ್ಕೆ ಬಿಜೆಪಿಯವರಿಗೆ ಸಮಸ್ಯೆ ಇದ್ದರೆ ಅದು ನಮ್ಮ ಸಮಸ್ಯೆ ಅಲ್ಲ ಎಂದು ಹೇಳಿದರು.











