
ಢಾಕಾ: ಬಾಂಗ್ಲಾದೇಶದಲ್ಲಿ ಇಸ್ಲಾಮಿಸ್ಟ್ ಗುಂಪುಗಳು ಸುಲಿಗೆ ಬೆದರಿಕೆ ಪತ್ರಗಳನ್ನು ಕಳುಹಿಸಿದ್ದು ದುರ್ಗಾ ಪೂಜೆಯ ಸಂದರ್ಭದಲ್ಲಿ ಕೋಮುಗಲಭೆ ಉಂಟಾಗಬಹುದೆಂಬ ಆತಂಕದ ಜೊತೆಗೆ ಈ ಸುಲಿಗೆಯ ಆತಂಕವು ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಖುಲ್ನಾ ನಗರದ ಡಕೋಪ್‍ನಲ್ಲಿರುವ 25ಕ್ಕೂ ಹೆಚ್ಚು ದೇವಾಲಯಗಳಿಗೆ ಐದು ದಿನಗಳ ಹಬ್ಬವನ್ನು ಆಚರಿಸಲು 5 ಲಕ್ಷ ರೂ. ಬೆದರಿಕೆ ಹಾಕಲಾಗಿದ್ದು ಸುಲಿಗೆ ಬೆದರಿಕೆಗಳ ವಿರುದ್ಧ ದೇವಾಲಯ ಸಮಿತಿಗಳು ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರ ಮೇಲೆ ಯಾವುದೇ ವಿಶ್ವಾಸವಿಲ್ಲ ಎಂದು ಪೂಜಾ ಸಮಿತಿಗಳು ಹೇಳಿಕೊಂಡಿವೆ. ಬೆದರಿಕೆಯ ಕಾರಣ, ಕೆಲವು ಪೂಜಾ ಸಮಿತಿಗಳು ಆಚರಣೆಯನ್ನು ರದ್ದುಗೊಳಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ದುರ್ಗಾ ಪೂಜೆ-ಸಂಬಂಧಿತ ಚಟುವಟಿಕೆಗಳನ್ನು ಆಜಾನ್‍ಗೆ ಐದು ನಿಮಿಷಗಳ ಮೊದಲು ಮತ್ತು ನಮಾಜ್ ಸಮಯದಲ್ಲಿ ಸ್ಥಗಿತಗೊಳಿಸುವಂತೆ ಸೂಚಿಸಿತ್ತು.













