ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ, ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಆಸ್ತಿ.ಎಸ್ ಶೆಟ್ಟಿ ರವರಿಗೆ ಸನ್ಮಾನ

ಕುಕ್ಕುಂದೂರಿನ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ಆಸ್ತಿ ಎಸ್ ಶೆಟ್ಟಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600 ರಲ್ಲಿ 596 ಅಂಕಗಳಿಸಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿರುತ್ತಾರೆ.
ಇವರು ಸತೀಶ್ಚಂದ್ರ ಶೆಟ್ಟಿ ಹೊಳ್ಮಗ್ಗೆ ಅನುಪಮ ಶೆಟ್ಟಿಯವರ ಸುಪುತ್ರಿಯಾಗಿದ್ದು ಮೂಲತಃ ಕುಂದಾಪುರದವರಾಗಿರುವ ಇವರು ಪ್ರಸ್ತುತ ಕುಕ್ಕುಂದೂರಿನಲ್ಲಿ ನೆಲೆಸಿರುತ್ತಾರೆ.
ಜ್ಞಾನಸುಧ ಕಾಲೇಜಿಗೆ ಹಾಗೂ ಕುಕ್ಕುಂದೂರಿಗೆ ಹೆಮ್ಮೆಯ ಗರಿಯನ್ನು ತೊಡಿಸಿದ ಈ ಪ್ರತಿಭಾನ್ವಿತೆಯ ಯಶಸ್ಸನ್ನು ಕಂಡು ಬಂಟರ ಸೇವಾ ಸಂಘ (ರಿ.) ಇದರ ಅಧ್ಯಕ್ಷರಾದ ಶ್ರೀಮತಿ ಜಯಂತಿ ಸುಧಾಕರ್ ಶೆಟ್ಟಿ, ಗೌರವಾಧ್ಯಕ್ಷರಾದ ಭರತ್ ಎನ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಕೆ ರವಿ ಶೆಟ್ಟಿ, ಕೋಶಾಧಿಕಾರಿಯಾದ ರಘುನಾಥ್ ಶೆಟ್ಟಿ, ನಿಕಟ ಪೂರ್ವ ಕಾರ್ಯದರ್ಶಿಯಾದ ಅಶೋಕ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಅನಿತಾ ಶೆಟ್ಟಿ, ರಘುರಾಮ್ ಶೆಟ್ಟಿ, ರಾಜೇಶ್ ಶೆಟ್ಟಿ ಬಸ್ರಿ, ಸಾಗರ್ ಶೆಟ್ಟಿ, ಕಿಶೋರ್ ಶೆಟ್ಟಿ, ಹರೀಶ್ ಶೆಟ್ಟಿ, ಹೇಮಲತಾ ಶೆಟ್ಟಿ, ಶಾಂತಿ ದಿನೇಶ್ ಶೆಟ್ಟಿ, ಅನಿತಾ ಶೆಟ್ಟಿ ಇವರ ಸಮ್ಮುಖದಲ್ಲಿ ಸನ್ಮಾನಿಸಿ ಭವಿಷ್ಯದ ಉಜ್ವಲತೆಗಾಗಿ ಆಶೀರ್ವಾದಪೂರ್ವಕವಾಗಿ ಶ್ರೀಮತಿ ಜಯಂತಿ ಸುಧಾಕರ್ ಶೆಟ್ಟಿ ಅವರು ಶುಭ ಹಾರೈಸಿದರು.