29.6 C
Udupi
Tuesday, April 21, 2026
spot_img
spot_img
HomeBlogಪ್ರತಿಷ್ಠಿತ ರೋಟರಿ ಕ್ಲಬ್ ನಿಟ್ಟೆ, 2024-25 ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

ಪ್ರತಿಷ್ಠಿತ ರೋಟರಿ ಕ್ಲಬ್ ನಿಟ್ಟೆ, 2024-25 ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

ಪ್ರತಿಷ್ಟಿತ ರೋಟರಿ ಕ್ಲಬ್, ನಿಟ್ಟೆ ಇದರಿಂದ ಪ್ರವರ್ತಿಸಲ್ಪಟ್ಟ ರೋಟರಿ ಸಮುದಾಯ ದಳ, ಕೆಮ್ಮಣ್ಣು, ನಿಟ್ಟೆ ಇದರ 2024-25ನೇ(36ನೇ ವರ್ಷದ) ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಣ್ಣು, ನಿಟ್ಟೆ ಇಲ್ಲಿ ನಡೆಯಿತು.

ಪದಪ್ರದಾನ ಅಧಿಕಾರಿಗಳಾಗಿ ರೋಟರಿ ಜಿಲ್ಲೆ 3182, zone -5 ಇದರ 2024-25ರ RCC Chairman MPH ರೊI ಪುಂಡಲೀಕ ಮರಾಠೆ ಕಾರ್ಯಕ್ರಮ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ RCC ಜಿಲ್ಲಾ ಪ್ರತಿನಿಧಿ ಪ್ರಸಾದ್ ಪಾದೂರು, ರೋಟರಿ ಕ್ಲಬ್, ನಿಟ್ಟೆ ಇದರ ಕಾರ್ಯದರ್ಶಿ ರೊI ಡಾ. ರಘುನಂದನ್ ಕೆ.ಆರ್, ಮಾಜಿ ಜಿಲ್ಲಾ ಪ್ರತಿನಿಧಿ ಶ್ರೀ ವೆಂಕಟಕೃಷ್ಣ ಕುಮಾರ್, RCC ಸಭಾಪತಿ ರೊI ಕೆ. ಅನಿಲ್ ಕುಮಾರ್ ಉಪಸ್ಥಿತರಿದ್ದರು. ಕುಮಾರಿ ಶ್ರೇಯಾ ಮತ್ತು ಸೌಮ್ಯಾ ಪ್ರಾರ್ಥಿಸಿದರು. 2023-24ನೇ ಸಾಲಿನ ಅಧ್ಯಕ್ಷ ಪ್ರದೀಪ್ ಸುವರ್ಣ ಸ್ವಾಗತಿಸಿದರು. ರೊI ಡಾ. ದಿಲೀಪ್ ಕುಮಾರ್ ಹಾಗೂ ಪ್ರಶಾಂತ್ ಕುಮಾರ್ ಅತಿಥಿ ಪರಿಚಯ ಗೈದರು. ಕಾರ್ಯದರ್ಶಿ ಪ್ರಕಾಶ್ ಸಾಲ್ಯಾನ್ ವರದಿ ವಾಚಿಸಿದರು. ನೂತನ ಅಧ್ಯಕ್ಷ ರಾಜೇಶ್ ಕುಲಾಲ್ ತಮ್ಮ ಕಾರ್ಯಯೋಜನೆಗಳಿಗೆ ಸರ್ವರ ಸಹಕಾರ ಯಾಚಿಸಿದರು. ಇದೇ ಸಂದರ್ಭದಲ್ಲಿ 7ನೇ ತರಗತಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಧನುಷ್ ಮತ್ತು ತೃಷಾರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಪೂರ್ವಾಧ್ಯಕ್ಷರುಗಳನ್ನು ಗೌರವಿಸಲಾಯಿತು. ಪೂರ್ವಾಧ್ಯಕ್ಷ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಉಮೇಶ್ ಕೋಟ್ಯಾನ್ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page