ಸರಕಾರಿ ಪದವಿ ಪೂರ್ವ ಕಾಲೇಜು, ಕ್ಕುಕುಜೆಯಲ್ಲಿ ಸ್ವಾತಂತ್ರ್ಯ ಸಂಭ್ರಮ
10 ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಖರ್ಚನ್ನು ವಹಿಸಿಕೊಂಡ ತಂಡ

ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಣ್ಣ ಪ್ರಯತ್ನದೊಂದಿಗೆ ಪ್ರಾರಂಭಗೊಂಡ ಉನ್ನತಿ ತಂಡದ ಮೂರನೇ ವರ್ಷದ ವಾರ್ಷಿಕ ಸಂಭ್ರಮವು ದಿನಾಂಕ ಇಂದು ಗುರುವಾರದಂದು ಸರಕಾರಿ ಪದವಿ ಪೂರ್ವ ಕಾಲೇಜು, ಕುಕ್ಕುಜೆಯಲ್ಲಿ ನಡೆಯಿತು. ಪ್ರತಿ ವರ್ಷ ಕಾರ್ಕಳ ತಾಲ್ಲೂಕಿನ ಯಾವುದಾದರೂ ಒಂದು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗೆ ಬೇಟಿ ಕೊಟ್ಟು ಅಲ್ಲಿನ ಮಕ್ಕಳೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ, ಸ್ಥಳೀಯ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸಿ ಅದರೊಂದಿಗೆ ಕಲಿಯಲು ಹಂಬಲವಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರತಿ ವರ್ಷವೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ, ಈ ಬಾರಿ 10 ವಿದ್ಯಾರ್ಥಿಗಳ ಒಂದು ವರ್ಷದ ವಿದ್ಯಾಭ್ಯಾಸದ ಖರ್ಚುನ್ನು ಉನ್ನತಿ ತಂಡ ವಹಿಸಿಕೊಂಡಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಕೇಶ್ ಹೆಗ್ಡೆಯವರು ವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರಸುಧ ಶೆಟ್ಟಿಯವರು ಮತ್ತು ಉನ್ನತಿ ತಂಡದ ಪರವಾಗಿ ಪ್ರಜ್ವಲ್ ಹಾಗೂ ಶ್ರೇಯ ಉಪಸ್ಥಿತರಿದ್ದರು.
ಕೌಶಿಕ್ ಅಮೀನ್ ಅತಿಥಿ ಗಣ್ಯರನ್ನು ಸ್ವಾಗತಿಸಿ ಉನ್ನತಿ ತಂಡದ ಕುರಿತಾಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಸುಧ ಶೆಟ್ಟಿ ಮಾತುಗಳನ್ನಾಡಿದರು.
ಕಾರ್ಯಕ್ರಮದ ಮುಖ್ಯ ಅಂಗವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಉನ್ನತಿ ತಂಡದ ವತಿಯಿಂದ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಹಾಗೂ ಸ್ಥಳೀಯ ವಿವಿಧ ಕ್ಷೇತ್ರದ 8 ಸಾಧಕರನ್ನು ಗೌರವಿಸಲಾಯಿತು. ಕುಕ್ಕುಜೆ ಶಾಲೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ 6 ವಿದ್ಯಾರ್ಥಿಗಳನ್ನು ಕೂಡ ಅವರೊಂದಿಗೆ ಅಭಿನಂದಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಯಾದ ದಯಾನಂದ ಹೆಗ್ಡೆಯವರು ಮಾತನಾಡಿದರು.
ಕಾರ್ಯಕ್ರಮದ ಕೊನೆಯ ಹಂತವಾಗಿ
ಶ್ರೇಯ ಪೂಜಾರಿಯವರು ವಂದಿಸಿದರು.
ಲಾವಣ್ಯ ಪೂಜಾರಿಯವರು ಕಾರ್ಯಕ್ರಮ ನಿರೂಪಿಸಿದರು.













