
ಕಾರ್ಕಳ : ಕಾರ್ಕಳ ಪೆರ್ವಾಜೆಯ ಸುವರ್ಣ ಭೂಮಿಯಲ್ಲಿರುವ ಶಿರ್ಡಿ ಸಾಯಿ ಬಾಬಾ ಮಂದಿರದ ಪ್ರಧಾನ ಅರ್ಚಕರು ಲಕ್ಷ್ಮಿ ನಾರಾಯಣ ಭಟ್ ತಡರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ.
ಪೆರ್ವಾಜೆಯ ಅಂಗಡಿ ಭಟ್ರು ಎಂದು ಕರೆಸಿಕೊಳ್ಳುತ್ತಿದ್ದ ಇವರು ಪೇರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಹಲವಾರು ದೇವಸ್ಥಾನಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುತ್ತಿದ್ದರು. ಪತ್ನಿ ,ಪುತ್ರ ಹಾಗೂ ಮಗಳನ್ನು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.






























































































































