
ಕಾರ್ಕಳ: ಆಗಸ್ಟ್ 13 ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆಯಲ್ಲಿ ಜಿಲ್ಲಾಮಟ್ಟದ ಬಾಲಕ ಬಾಲಕಿಯರ ಟೇಬಲ್ ಟೆನ್ನಿಸ್ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮವನ್ನು ಕಾರ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಲೋಕೇಶ್ ಎಚ್ ಇವರು ನೆರವೇರಿಸಿ ಕ್ರೀಡಾಳುಗಳಿಗೆ ಶುಭ ಹಾರೈಸಿದರು.
ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ರವಿಕಾಂತ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶ್ರೀಯುತ ಚಂದ್ರಶೇಖರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀಯುತ ಪ್ರದೀಪ್ ರಾಣಿ, ಪುರಸಭಾ ಸದಸ್ಯರು ಕಾರ್ಕಳ, ಶ್ರೀಯುತ ರವಿಚಂದ್ರ ಕಾರಂತ್ ದೈಹಿಕ ಶಿಕ್ಷಣಾಧಿಕಾರಿ ಕಾರ್ಕಳ, ಶ್ರೀಯುತ ಸಂಜೀವ ದೇವಾಡಿಗ, ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಕ. ರಾ. ಪ್ರಾ. ಶಾ. ಶಿ. ಸಂಘ ಉಡುಪಿ, ಶ್ರೀಯುತ ಸಂತೋಷ್ ಕುಮಾರ್ ಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿಗಳು ಕಾರ್ಕಳ, ಶ್ರೀಯುತ ಪ್ರಕಾಶ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ದೈ. ಶಿ. ಸಂಘ ಉಡುಪಿ, ಶ್ರೀಯುತ ಶಶಿಧರ್ ಶೆಟ್ಟಿ, ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಶ್ರೀಮತಿ ಸುಮಾ ಎಸ್ ಡಿ ಎಂ ಸಿ ಉಪಾಧ್ಯಕ್ಷರು, ಶ್ರೀಮತಿ ಜ್ಯೋತಿ ಸಿ ಆರ್ ಪಿ ಸಾಣೂರು ಕ್ಲಸ್ಟರ್, ಶ್ರೀಯುತ ದಿವಾಕರ್ ಮುಖ್ಯೋಪಾಧ್ಯಾಯರು, ಸ. ಪ್ರೌ. ಶಾಲೆ ಪೆರ್ವಾಜೆ ಮುಂತಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ ಸ್ವಾಗತಿಸಿ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಸುರೇಶ್ ಎಂ. ವಂದಿಸಿದರು. ಸಹ ಶಿಕ್ಷಕಿ ಶ್ರೀಮತಿ ಆಶಾ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು.













