ಜೂನ್ 6, ಮಧ್ಯಾಹ್ನ 12 ಗಂಟೆಗೆ ಕೆಇಎ ಕಚೇರಿಯಲ್ಲಿ ರಿಸಲ್ಟ್ ಔಟ್

ನಾಳೆ 2026 ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳಲಿದೆ.
ಜೂನ್ 6 ರಂದು ಶನಿವಾರ ಸಿಇಟಿ ಫಲಿತಾಂಶ ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ನಾಳಿ ಮಧ್ಯಾಹ್ನ ಸರಿಯಾಗಿ 12 ಗಂಟೆಗೆ ಯುಜಿಸಿಇಟಿ ಫಲಿತಾಂಶ ಹೊರಬೀಳಲಿದೆ.
ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಹ ಅಧ್ಯಕ್ಷರು ಆದ ಡಾಕ್ಟರ್ ಶರಣ್ ಪ್ರಕಾಶ್ ಪಾಟೀಲ ಅವರು ಫಲಿತಾಂಶವನ್ನು ಬಿಡುಗಡೆಗೊಳಿಸಲಿದ್ದಾರೆ.
ವಿದ್ಯಾರ್ಥಿಗಳು ಮಧ್ಯಾಹ್ನ 12 ಗಂಟೆಯ ನಂತರ ಕೆಇಎ ಅಧಿಕೃತ ವೆಬ್ಸೈಟ್ KEA UGCET Results Portal ನಲ್ಲಿ ತಮ್ಮ ಫಲಿತಾಂಶ ಹಾಗೂ ರ್ಯಾಂಕ್ ಪರಿಶೀಲಿಸಬಹುದು.
































