31 C
Udupi
Thursday, April 23, 2026
spot_img
spot_img
HomeBlogನಮ್ಮ ಜವನೆರ್ ಮೀರಾ-ಭಾಯಂದರ್ ವತಿಯಿಂದ ಮುದ್ದು ರಾಧೆ ಕೃಷ್ಣ ಸ್ಪರ್ಧೆಯ ಉದ್ಘಾಟನಾ ಸಮಾರಂಭ

ನಮ್ಮ ಜವನೆರ್ ಮೀರಾ-ಭಾಯಂದರ್ ವತಿಯಿಂದ ಮುದ್ದು ರಾಧೆ ಕೃಷ್ಣ ಸ್ಪರ್ಧೆಯ ಉದ್ಘಾಟನಾ ಸಮಾರಂಭ

ಭಾಯಂದರ್: ಆಗಸ್ಟ್ 27ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಮ್ಮ ಜವನೆರ್ ಮೀರಾಬಾಯಂದರ್ ಮೀರಾ ರೋಡ್ ಪೂರ್ವದ ಕನಕಿಯ ಪ್ರದೇಶದಲ್ಲಿರುವ ಶೆಹನಾಯಿ ಸಭಾಗೃಹದಲ್ಲಿ ಮುದ್ದು ರಾಧೆ, ಮುದ್ದುಕೃಷ್ಣ, ರಾಧಾಕೃಷ್ಣ ಸ್ಪರ್ಧೆಯನ್ನು ಆಯೋಜಿಸಿದ್ದು ಇದನ್ನು ಉದ್ಘಾಟಿಸಿ ಮಾತನಾಡಿದ ವಿದ್ವಾನ್ ಸಂತೋಷ್ ಕುಮಾರ್ ಭಟ್ ಮುದ್ರಾಡಿ ಶ್ರೀ ಕೃಷ್ಣನ ಅಸ್ತಿತ್ವ ಇಲ್ಲದಿದ್ದರೆ ನಮ್ಮ ಸಂಸ್ಕೃತಿ ದೇಶದಿಂದ ಮರೆಯಾಗುವ ಸಾಧ್ಯತೆಯಿತ್ತು. ಮಕ್ಕಳಲ್ಲಿಯೇ ದೇವರನ್ನು ಕಾಣುವ ಸಂಸ್ಕೃತಿ ನಮ್ಮದಾದ್ದರಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಮಕ್ಕಳಲ್ಲಿ ಕೃಷ್ಣನ ವೇಷ ಹಾಕಿ ಆ ಮೂಲಕ ದೇವರು ಎನ್ನುವ ಅನುಸಂಧಾನದಲ್ಲಿ ನಾವು ಆ ಮಕ್ಕಳನ್ನು ನೋಡುತ್ತೇವೆ. ಆ ನಿಟ್ಟಿನಲ್ಲಿ ಮುದ್ದು ಮಕ್ಕಳಿಗೆ ನಮ್ಮ ಜವನೆರ್ ಸಂಸ್ಥೆಯಿಂದ ಆಯೋಜನೆಗೊಂಡ ಮುದ್ದುಕೃಷ್ಣ ಸ್ಪರ್ಧೆ ಬಹಳ ಅರ್ಥಪೂರ್ಣವಾದದ್ದು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮಾಜಿನಗರ ಸೇವಕ ಅರವಿಂದ ಎಂ ಶೆಟ್ಟಿ, ಉದ್ಯಮಿ ಆನಂದ್ ಶೆಟ್ಟಿ ಐಕಳ, ಸಿಎ ಪ್ರಕಾಶ್ ಶೆಟ್ಟಿ, ಮೀರಾಬಾಯಂದರ್ ನವ ತರುಣ ಮಿತ್ರ ಮಂಡಳಿಯ ಅಧ್ಯಕ್ಷ ಯೋಗೇಂದ್ರ ಗಾಣಿಗ, ಉದ್ಯಮಿ ಚಂದ್ರಹಾಸ ಶೆಟ್ಟಿ ಇನ್ನ, ಶ್ರೀ ನಿತ್ಯಾನಂದ ಸೇವಾ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಗೋವಿಂದ ಗಾಣಿಗ, ತುಳು ಕನ್ನಡ ವೆಲ್ಫೇರ್ ಸಂಸ್ಥೆಯ ಅಧ್ಯಕ್ಷ ಎ.ಕೆ ಹರೀಶ್, ಭಾರತ್ ಬ್ಯಾಂಕಿನ ನಿರ್ದೇಶಕ ನರೇಶ್ ಕೆ.ಪೂಜಾರಿ ಬಂಟ್ಸ್ ಫೋರಮ್ ಮೀರಾ ಭಾಯಂದರ್ ಇದರ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸುಮತಿ ಆರ್ ಶೆಟ್ಟಿ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page