
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂರೂರು ಹಿರ್ಗಾನ ಶ್ರೀ ದತ್ತಾತ್ರೇಯ ಸಾಂಸ್ಕೃತಿಕ ಪ್ರತಿಷ್ಠಾನ ನೆಲ್ಲಿಕಟ್ಟೆ ಹಿರ್ಗಾನ ಇವರ ಆಶ್ರಯದಲ್ಲಿ 19 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ 2ನೇ ವರ್ಷದ ಸಾಂಸ್ಕೃತಿಕ ಕಲರವವು 19 ನೇ ವರ್ಷದ ಮೂಜುರ್ದ ಗಣೇಶೋತ್ಸವ ವೇದಿಕೆಯಲ್ಲಿ ಸೆಪ್ಟೆಂಬರ್ 1 ಸೋಮವಾರ 7.30 ರಿಂದ ನಡೆಯಿತು.
ತುಳು ರಂಗಭೂಮಿ ನಟ, ಸಾಹಿತಿ ಪ್ರವೀಣ್ ನೆಲ್ಲಿಕಟ್ಟೆ ಅವರಿಗೆ ಕಲಾಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ನಂತರ ರಂಗಭೂಷಣ ಮಣಿ ಕೋಟೆಬಾಗಿಲು ಕಥೆ ಸಂಭಾಷಣೆ ನಿರ್ದೇಶನ ಸಾರಾಥ್ಯದ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸುವ ಕದಂಬ ನಾಟಕ ನಡೆಯಿತು.



















