28.9 C
Udupi
Wednesday, May 6, 2026
spot_img
spot_img
HomeBlogಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಚೀನಾ ಮತ್ತು ಪಾಕಿಸ್ತಾನಕ್ಕೆ ಟೆನ್ಶನ್

ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಚೀನಾ ಮತ್ತು ಪಾಕಿಸ್ತಾನಕ್ಕೆ ಟೆನ್ಶನ್

ಡೊನಾಲ್ಡ್ ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಚೀನಾ ಮತ್ತು ಪಾಕಿಸ್ತಾನಕ್ಕೆ ಭೀತಿಯುಂಟಾಗಿದೆ.

ಪ್ರಮಾಣ ವಚನ ಸ್ವೀಕರಿಸುವ ಮುನ್ನ ಟ್ರಂಪ್ ಚೀನಾ ಜತೆಗಿನ ಸಂಬಂಧ ಸುಧಾರಿಸುವ ಸುಳಿವು ನೀಡಿದ್ದು ಆದರೆ ಪ್ರಮಾಣವಚನ ಸ್ವೀಕರಿಸಿದ ನಂತರ ಅವರು ಪನಾಮ ಕಾಲುವೆಯ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳುವುದಾಗಿ ಘೋಷಿಸಿ ಚೀನಾವನ್ನು ಅಚ್ಚರಿಗೊಳಿಸಿದರು. ಅದೇ ಸಮಯದಲ್ಲಿ, ಪಾಕಿಸ್ತಾನ ಕೂಡ ತೀವ್ರ ಆಘಾತಕ್ಕೆ ಒಳಗಾಗಿದೆ.

1978 ರವರೆಗೆ ಅಮೇರಿಕಾದ ನಿಯಂತ್ರಣದಲ್ಲಿದ್ದ ಪನಾಮ ಕಾಲುವೆ 1979 ರಿಂದ, ಅಮೇರಿಕಾ ಮತ್ತು ಪನಾಮ ಜಂಟಿಯಾಗಿ ಇದನ್ನು ನಿಯಂತ್ರಿಸಲು ಪ್ರಾರಂಭಿಸಿದವು. ಆದರೆ ನಂತರ 1999 ರಲ್ಲಿ ಅಮೆರಿಕ ತನ್ನ ನಿಯಂತ್ರಣವನ್ನು ಪನಾಮಕ್ಕೆ ಹಸ್ತಾಂತರಿಸಿದ್ದು ನಂತರ, ಚೀನಾ ಪನಾಮದೊಂದಿಗೆ ತನ್ನ ಸ್ನೇಹವನ್ನು ಗಾಢವಾಗಿಸಿತು.

ಪನಾಮ ಕಾಲುವೆಯಲ್ಲಿ ಚೀನಾ ಎರಡು ದೊಡ್ಡ ಬಂದರುಗಳನ್ನು ನಿರ್ಮಿಸಿತು. ಕ್ರಮೇಣ ಪನಾಮ ಕಾಲುವೆಯ ನಿಯಂತ್ರಣ ಚೀನಾದ ಕೈ ಸೇರಿತು. ಪಂಚದ ಎಲ್ಲಾ ದೇಶಗಳು ವ್ಯಾಪಾರಕ್ಕಾಗಿ ಪನಾಮ ಕಾಲುವೆ ಜಲಮಾರ್ಗವನ್ನು ಬಳಸುತ್ತವೆ. ಅಮೆರಿಕ ಕೂಡ ಇದನ್ನೇ ಬಳಸುತ್ತಿದ್ದು ಅಮೆರಿಕದಲ್ಲಿ ಈ ಕಾಲುವೆ ಇಲ್ಲದಿದ್ದರೆ, ಪೂರ್ವದಿಂದ ಪಶ್ಚಿಮ ಅಮೆರಿಕಕ್ಕೆ ಹೋಗಲು 20 ಕಿಲೋಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣಿಸಬೇಕಾಗುತ್ತದೆ.

ಆದರೆ ಈ ಮಾರ್ಗವನ್ನು ಬಳಸುವುದು 10 ರಿಂದ 12 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಈ ಕಾಲುವೆ ಅಮೆರಿಕಕ್ಕೆ ಮುಖ್ಯವಾಗಿದೆ. ಪನಾಮದತ್ತ ಅಮೆರಿಕದ ಗಮನವನ್ನು ಕಂಡು ಷಿ ಜಿನ್‌ಪಿಂಗ್ ಚಿಂತೆಗೊಳಗಾಗಿದ್ದಾರೆ.

ಭಯೋತ್ಪಾದನೆಯ ವಿರುದ್ಧ ಟ್ರಂಪ್ ಅವರ ಕಠಿಣ ನಿಲುವು ಪಾಕಿಸ್ತಾನವನ್ನು ಆಘಾತಕ್ಕೀಡು ಮಾಡಿದೆ. ಈ ಹಿಂದೆ, ಟ್ರಂಪ್ ತಮ್ಮ ಮೊದಲ ಅವಧಿಯಲ್ಲೂ ಪಾಕಿಸ್ತಾನವನ್ನು ಭಯೋತ್ಪಾದನೆಯನ್ನು ಉತ್ತೇಜಿಸುವ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್‌ಎಟಿಎಫ್) ಪಟ್ಟಿಯಲ್ಲಿ ಸೇರಿಸಿದ್ದ ಕಾರಣದಿಂದಾಗಿ ಪಾಕಿಸ್ತಾನವು ಭಯೋತ್ಪಾದಕರಿಗೆ ಹಣ ನೀಡುವುದನ್ನು ನಿಲ್ಲಿಸಿತು. ಈ ನಿಷೇಧವು ಸುಮಾರು 4 ವರ್ಷಗಳ ಕಾಲ ಪಾಕಿಸ್ತಾನದ ಮೇಲೆ ಜಾರಿಯಲ್ಲಿತ್ತು. ಇದು ಪಾಕಿಸ್ತಾನದ ಆರ್ಥಿಕತೆಯಲ್ಲಿ ಬಡತನಕ್ಕೆ ಕಾರಣವಾಯಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page