27.7 C
Udupi
Tuesday, April 21, 2026
spot_img
spot_img
HomeBlogಜ್ಞಾನಸುಧಾ ವಿದ್ಯಾಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

ಜ್ಞಾನಸುಧಾ ವಿದ್ಯಾಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

ದೇಶಭಕ್ತಿಯು ನಮ್ಮ ಪ್ರತಿ ಕೆಲಸ ಕಾರ್ಯದಲ್ಲಿ ಕಾಣಸಿಗಬೇಕು: ಲೆ. ಕಮಾಂಡರ್ ಭರತ್ ಕುಮಾರ್

ಸ್ವಾತಂತ್ರ ಹೋರಾಟಗಾರರ ಯಶೋಗಾಥೆಗಳು ನಮಗೆ ಆದರ್ಶನೀಯ: ಡಾ. ಸುಧಾಕರ್ ಶೆಟ್ಟಿ

ಗಣಿತನಗರ : ಕಾರ್ಕಳ ಜ್ಞಾನಸುಧಾ ಶಿಕ್ಷಣ
ಸಂಸ್ಥೆಗಳ ಆವರಣದಲ್ಲಿ 78ನೇ ಧ್ವಜಾರೋಹಣವನ್ನು
ಮಾಜಿ ನೌಕಾಧಿಕಾರಿ, ಲೆ.ಕಮಾಂಡರ್ ಭರತ್ ಕುಮಾರ್
ನೆರವೇರಿಸಿದರು.

ಧ್ವಜಾರೋಹಣವನ್ನು ನೆರವೇರಿಸಿ
ಮಾತನಾಡಿದ ಇವರು ದೇಶ ಭಕ್ತಿಯು ನಮ್ಮ ಪ್ರತಿ
ಕೆಲಸಕಾರ್ಯದಲ್ಲೂ ಇರಬೇಕು. ನಮ್ಮ
ಪ್ರಧಾನಿಯವರ ಕನಸಾದ ಸದೃಢ ಭಾರತದ
ನಿರ್ಮಾಣದಲ್ಲಿ ನಾವೆಲ್ಲರೂ ನಮ್ಮ ಪಾತ್ರವನ್ನು
ಧನಾತ್ಮಕ ಚಿಂತನೆಗಳ ಮೂಲಕ
ಸಾಕಾರಗೊಳಿಸಬೇಕು ಎಂದರು. ಅದೆಷ್ಟೋ
ಹೋರಾಟಗಾರರ ಯಶೋಗಾಥೆಗಳು ನಮಗೆ
ಆದರ್ಶನೀಯ ಎಂದರು.


ಇದೇ ಸಂದರ್ಭ ,ಅಜೆಕಾರ್ ಪದ್ಮಗೋಪಾಲ್
ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುಧಾಕರ್
ಶೆಟ್ಟಿಯುವರು, ಟ್ರಸ್ಟಿ ಸಿ.ಎ. ನಿತ್ಯಾನಂದ ಪ್ರಭು,
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ
ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲರಾದ
ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲರಾದ
ಸಾಹಿತ್ಯ ಹಾಗೂ ಶ್ರೀಮತಿ ಉಷಾ ರಾವ್ ಯು ಮತ್ತು
ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಶ್ರೀಮತಿ ವಾಣಿ
ಕೆ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಸಂಸ್ಥೆಯ ಸಾರ್ವಜನಿಕ
ಸಂಪರ್ಕಾದಿಕಾರಿ ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು.
ಕನ್ನಡ ಉಪನ್ಯಾಸಕ ಸಂತೋಷ್ ನೆಲ್ಲಿಕಾರು
ನಿರೂಪಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page