
ಕಾರ್ಕಳ: ಮೇ 21 ರಂದು ಕಸಬಾ ಗ್ರಾಮದ ಜೋಡುರಸ್ತೆ ಹಿಮ್ಮುಂಜೆ ರಸ್ತೆಯ ಮಟನ್ ಸ್ಟಾಲ್ ಬಳಿಯ ಮೀನು ಮಾರುಕಟ್ಟೆಯಲ್ಲಿ ಗಣೇಶ, ಧರ್ಮಪಾಲ, ಮಣಿಕಂಠ ಎಂಬವರು ಮಟ್ಕಾ ಜುಗಾರಿ ಆಟ ಆಡುತ್ತಿರುವ ಕುರಿತು ಖಚಿತ ಮಾಹಿತಿ ಬಂದ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ದಾಳಿ ನಡೆಸಿದ್ದು ಆರೋಪಿ ಸಹಿತ ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ಸಂಖ್ಯೆ ಬರೆದ ಚೀಟಿ, 670 ರೂ. ಮತ್ತು ಪೆನ್ನನ್ನು ವಶಪಡಿಸಿಕೊಂಡಲಾಗಿದೆ.
ಇದಲ್ಲದೆ ವಿಚಾರಣೆ ವೇಳೆ ಆರೋಪಿಗಳು ಆಟದಲ್ಲಿ ಸಂಗ್ರಹ ಮಾಡುತ್ತಿದ್ದ ಹಣವನ್ನು ಮೂಜೂರಿನ ರಮೀಜ್ ಎಂಬಾತನಿಗೆ ನೀಡುತ್ತಿರುವುದಾಗಿ ತಿಳಿದು ಬಂದಿದ್ದು ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











































