
ಉಡುಪಿ ಜಿಲ್ಲಾ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘ ಸಾರಧಿ ಭವನ ಉಡುಪಿ ಇದರ ನೂತನ ಅಧ್ಯಕ್ಷರಾಗಿ ಉಡುಪಿ ವಿಭಾಗ ಲೊಕೋಪಯೋಗಿ ಇಲಾಖೆಯ ಜಬಿಯುಲ್ಲಾ ಖಾನ್ ಅವಿರೋಧವಾಗಿ ಆಯ್ಕೆಯಾದರು. ಆ.೨೬ರಂದು ಸಂಘದ ಕಚೇರಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ರಜತಾದ್ರಿ ಮಣಿಪಾಲ ಸಹಕಾರ ಸಂಘಗಳ ಉಪನಿಭಂದಕ ರೋಹಿತ್ ಕುಮಾರ್ ಚುನಾವಣಾಧಿಕಾರಿಯಾಗಿದ್ದರು.
ಉಪಾಧ್ಯಕ್ಷರಾಗಿ ಧರ್ಮೇಂದ್ರ ಎಸ್. (ಆರೋಗ್ಯ ಇಲಾಖೆ) ಕಾರ್ಯದರ್ಶಿಯಾಗಿ ದಾಮೋದರ (ಸಮಾಜ ಕಲ್ಯಾಣ ಇಲಾಖೆ) ಖಜಾಂಚಿಯಾಗಿ ದಿನೇಶ್ (ಅಬಕಾರಿ ಇಲಾಖೆ) ಸಂಘಟನಾ ಕಾರ್ಯದರ್ಶಿ ಟಿ.ಕೆ. ದೇವದಾಸ್ (ಸಣ್ಣ ನೀರಾವರಿ ಇಲಾಖೆ) ಜೊತೆ ಕಾರ್ಯದರ್ಶಿ ಸತೀಶ್ ಕೆ. (ಆರೋಗ್ಯ ಇಲಾಖೆ) ಮತ್ತು ಕಾರ್ಯಕಾರಿ ಸಮಿತಿಗೆ ಮಚೇಂದ್ರ ಜೋಗಿ (ಕಂದಾಯ ಇಲಾಖೆ) ದಿನೇಶ್ ಕುಮಾರ್ (ಆರೋಗ್ಯ ಇಲಾಖೆ) ಸಿದ್ದಾರೂಡ (ಕಂದಾಯ ಇಲಾಖೆ) ಶಂಕರ ಪಿ. (ಆರೋಗ್ಯ ಇಲಾಖೆ) ಮಂಜುನಾಥ (ಆರೋಗ್ಯ ಇಲಾಖೆ) ಇವರು ಆಯ್ಕೆಗೊಂಡರು.ಮುಖ್ಯ ಅತಿಥಿಗಳಾಗಿ ಶ್ರೀ ಅಂಪಾರು ದಿನಕರ ಶೆಟ್ಟಿ (ಜಿಲ್ಲಾಧ್ಯಕ್ಷರು ಸರಕಾರಿ ನೌಕರರ ಸಂಘ, ಉಡುಪಿ ಜಿಲ್ಲೆ) ಆನಂದ ಜತ್ತನ್ಸ (ರಾಜ್ಯ ಪರಿಷತ್ ಸದಸ್ಯರು) ಸರ‍್ಯ ಶೇರಿಗಾರ್ (ಮಾಜಿ ಅಧ್ಯಕ್ಷರು) ಕೇಶವ ಪೂಜಾರಿ (ಮಾಜಿ ಉಪಾಧ್ಯಕ್ಷರು) ಶೇಷಪ್ಪ (ನಿಕಟ ಪೂರ್ವ ಅಧ್ಯಕ್ಷ) ಉಪಸ್ಥಿತರಿದ್ದರು. ಈ ಸಂದರ್ಭ ಇತ್ತೀಚೆಗೆ ಸೇವೆಯಿಂದ ವಯೋನಿವೃತ್ತಿ ಹೊಂದಿದ ಜೋಯ್ (ಅರಣ್ಯ ಇಲಾಖೆ) ಇವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು.













