
ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ ಮತ್ತು ಪದವಿಪೂರ್ವ ಶಿಕ್ಷಣ
ಇಲಾಖೆ, ಉಡುಪಿ ಜಿಲ್ಲೆ, ಕರ್ನಾಟಕ ಸರಕಾರ, ಉಡುಪಿ ಜಿಲ್ಲಾ
ಪಂಚಾಯತ್ ಇವರ ಆಶ್ರಯದಲ್ಲಿ ಸರಕಾರಿ ಪದವಿಪೂರ್ವ
ಕಾಲೇಜು, ಬಜಗೋಳಿ ಇಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ
ಪ್ರೌಢಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರ ವಾಲಿಬಾಲ್
ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ
ಪ್ರೌಢಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ
ಪಡೆದು ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದೆ.
ಈ ಮೂಲಕ ನಿರಂತರ ಎರಡನೇ ಬಾರಿಗೆ ಕ್ರೆöÊಸ್ಟ್ಕಿಂಗ್
ಪ್ರೌಢಶಾಲೆ ಬಾಲಕಿಯರ ವಿಭಾಗದಲ್ಲಿ ಮೈಸೂರು ವಿಭಾಗ
ಮಟ್ಟಕ್ಕೆ ಆಯ್ಕೆಯಾದಂತಾಗಿದೆ. ಎಂಟನೇ ತರಗತಿಯ
ಶಗುನ್ ವರ್ಮ, ಶೈನಿ ಡಿಸೋಜ, ಅವ್ನಿ, ಕಾರ್ತಿಕಾ ಶೆಟ್ಟಿ,
ಒಂಬತ್ತನೇ ತರಗತಿಯ ಕೀರ್ತನಾ ಡಿ’ಸೋಜ, ವಿದ್ಯಾಶ್ರೀ
ದೇವಾಡಿಗ, ವಿಲ್ಶಾ ಡಿ’ಸೋಜ, ಹತ್ತನೇ ತರಗತಿಯ ಶ್ರಾವ್ಯ
ಶೆಟ್ಟಿ, ವರುಣ ಶೆಟ್ಟಿ ಶಾಲಾ ತಂಡವನ್ನು ಪ್ರತಿನಿಧಿಸಿದ್ದರು.
ಶಗುನ್ ವರ್ಮ ಅತ್ಯುತ್ತಮ ಅಟೇಕರ್ ಪ್ರಶಸ್ತಿ
ಪಡೆದರೆ ವರುಣ ಶೆಟ್ಟಿ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿಗೆ
ಭಾಜನರಾದರು. ದೈಹಿಕ ಶಿಕ್ಷಣ ಶಿಕ್ಷಕರಾದ
ಕೃಷ್ಣಪ್ರಸಾದ್, ಪ್ರಕಾಶ್ ನಾಯ್ಕ್, ಕು.ಲಾವಣ್ಯ ಶೆಟ್ಟಿ
ತಂಡದ ನೇತೃತ್ವ ವಹಿಸಿದ್ದರು.


































