ಮುದ್ರಾಡಿ ಎಂ ಎನ್ ಡಿ ಎಸ್ ಎಂ ಅನುದಾನಿತ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಹೆಬ್ರಿ :ಕಲಿಕೆ ಮತ್ತು ಪರೀಕ್ಷೆಗಳು ವ್ಯಕ್ತಿಯನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುವುದರ ಜೊತೆಗೆ, ಕ್ರೀಡೆಗಳಲ್ಲಿನ ಅನುಭವಗಳು ನಿಜವಾದ ಜೀವನ ಪಾಠ ಬೋಧಿಸುವಂತದ್ದು. ಸೋಲು ಮತ್ತು ನಿರಾಶೆಗಳು ನಮ್ಮನ್ನು ಪುನರಪಿ ಪುಟಿದೇಳುವಂತೆ ಮಾಡುತ್ತದೆ. ಲಕ್ಷ್ಯ ಪ್ರಾಪ್ತಿ ತನಕ ವಿರಾಮ ಸಲ್ಲದು ಎಂದು ಮುದ್ರಾಡಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಬಂಧಕ ಶ್ರೀ ಕಾರ್ತಿಕ್ ನಾಯ್ಕ್ ರವರು ಹೇಳಿದರು. ಅವರು ಮುದ್ರಾಡಿಯ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟದ ಪಥ ಸಂಚಲನೆಯ ಗೌರವ ರಕ್ಷೆ ಸ್ವೀಕರಿಸಿ, ಕ್ರೀಡಾ ಜ್ಯೋತಿ ಬೆಳಗಿ ಮಾತನಾಡಿದರು .
ಮುದ್ರಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ವಸಂತಿ ಪೂಜಾರಿ ಶಾಲಾ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು . ವಿದ್ಯಾಸಾಗರ್ ಎಜುಕೇಶನ್ ಟ್ರಸ್ಟ್ (ರಿ.) ನ ಕಾರ್ಯದರ್ಶಿ ಶ್ರೀ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಇಂದಿರಾ ಬಾಯರಿ ಸ್ವಾಗತಿಸಿ, ಸಹ ಶಿಕ್ಷಕ ಮಹೇಶ್ ನಾಯ್ಕ ಕೆ. ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕ ರಘುಪತಿ ಹೆಬ್ಬಾರ್ ವಂದಿಸಿದರು. ರಕ್ಷಕ – ಶಿಕ್ಷಕ ಸಮಿತಿ ಅಧ್ಯಕ್ಷ ಸುರೇಶ್ ಕುಲಾಲ್, ಪಂಚಾಯತ್ ಉಪಾಧ್ಯಕ್ಷೆ ರಮ್ಯಾ ಕಾಂತಿ, ಸದಸ್ಯರಾದ ಸನತ್ ಕುಮಾರ್ ಮುದ್ರಾಡಿ, ಶಿಕ್ಷಕರಾದ ಬಲ್ಲಾಡಿ ಚಂದ್ರಶೇಖರ್ ಭಟ್, ಆನಂದ ಪಿ. ವಿ., ಶ್ಯಾಮಲಾ ನಾರಾಯಣ ಕೊಠಾರಿ, ಮಹೇಶ್ ಕಾನ್ಗುಂಡಿ, ವಿದ್ಯಾರ್ಥಿ ನಾಯಕ ರಂಜಿತ್, ವಿದ್ಯಾರ್ಥಿಗಳು, ಹೆತ್ತವರು ಹಾಗೂ ಪೋಷಕರು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ,
ಬಹುಮಾನದ ಪ್ರಾಯೋಜಕರಾದ ಗುಡ್ಡೆಯಂಗಡಿ ಆರ್ಡಿಯ ಶಾಲಿನಿ ಥರ್ಮಲ್ ಎನರ್ಜಿ ಪ್ರೊಡಕ್ಟ್ಸ್ ರವರು ನೀಡಿದ ಬಹುಮಾನ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಅನಂತರ ಪೋಷಕರಿಗೂ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.



















