
ಕಾರ್ಕಳ: ರೋಟರಾಕ್ಟ್ ಕ್ಲಬ್ ಕಾರ್ಕಳ ಮತ್ತು ರೈಡರ್ಸ್ ಆಫ್ ಕಾರ್ಕಳ ಇವರ ಸಹಯೋಗದಲ್ಲಿ ದಿನಾಂಕ 15/08/2024 ಗುರುವಾರ 78ನೇ ಸ್ವಾತಂತ್ರೋತ್ಸವದ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಲಗುಪ್ಪೆ ಇಲ್ಲಿ ಧ್ವಜಾರೋಹಣ ಕಾರ್ಯಕ್ರಮ, ನಂತರ ಕಲ್ಲಗುಪ್ಪೆಯಿಂದ ಪಡುಬಿದ್ರೆ ಬೀಚ್ ವರೆಗೆ ಸುಮಾರು 150 ಬೈಕ್ ಸವಾರರು ಜೊತೆಗೂಡಿ ರಸ್ತೆ ಸಂಚಾರ ನಿಯಮ ಮತು ಜಾಗೃತಿ ಕಾರ್ಯಕ್ರಮದ ಅಂಗವಾಗಿ ಬೃಹತ್ ಬೈಕ್ ರಾಲಿ ನಡೆಯಲಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













