26.1 C
Udupi
Thursday, April 23, 2026
spot_img
spot_img
HomeBlogಕಾರ್ಕಳ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳ, ದೇಶಭಕ್ತಿ ಗೀತಾ ಗಾಯನ ಸ್ಪರ್ಧೆ

ಕಾರ್ಕಳ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳ, ದೇಶಭಕ್ತಿ ಗೀತಾ ಗಾಯನ ಸ್ಪರ್ಧೆ

ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಕಳ ವತಿಯಿಂದ ತಾಲೂಕು ಮಟ್ಟದ ದೇಶಭಕ್ತಿ ಗೀತಾ ಗಾಯನ ಸ್ಪರ್ಧೆಯು ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ನಡೆಯಿತು.


ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀಮದ್ ಭುವನೇಂದ್ರ ವಿದ್ಯಾಸಂಸ್ಥೆಯ ಸಂಚಾಲಕರಾದ ನರೇಂದ್ರ ಕಾಮತ್ ಕೆ ಇವರು ದೀಪ ಪ್ರಜ್ವಲನೆ ಮಾಡಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.

ಸಮಾರಂಭದ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಗೈಡ್ ಆಯಃಕ್ತೆ ಶ್ರೀಮತಿ ಜ್ಯೋತಿ ಜೆ ಪೈ ಉಪಾಧ್ಯಕ್ಷ ಶ್ರೀ ಜಗದೀಶ್ ಹೆಗ್ಡೆ ಉಪಾಧ್ಯಕ್ಷೆ ಶ್ರೀಮತಿ ಸಾವಿತ್ರಿ ಮನೋಹರ್ ಶ್ರೀಮದ್ ಭುವನೇಂದ್ರ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಆರ್ ನಾರಾಯಣ ಶೆಣೈ ಕೋಶಾಧಿಕಾರಿ ಸತೀಶ್ ಬಿ ಶೆಟ್ಟಿ ಹಾಗೂ ತೀರ್ಪುಗಾರರಾದ ಶ್ರೀ ರಾಘವೇಂದ್ರ ಕಾರ್ಕಳ ಶ್ರೀಮತಿ ಶಾರ್ವರಿ ಉಪಾಧ್ಯಾಯ ಶ್ರೀ ಮಲ್ಲಿಕಾ ಹೆಬ್ಬಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭುವನೇಂದ್ರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾ ಕಿಣಿಯವರು ಸ್ವಾಗತಿಸಿ ಗೈಡ್ ಶಿಕ್ಷಕಿ ಶ್ರೀಮತಿ ಇಂದಿರಾ ಪಿ.ನಾಯಕ್ ನಿರೂಪಿಸಿ ‌ಸ್ಕೌಟ್ ಶಿಕ್ಷಕ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಗಣೇಶ್ ಜಾಲ್ಸೂರು ಧನ್ಯವಾದವಿತ್ತರು.

ಕಾರ್ಕಳ ತಾಲೂಕಿನ ಸ್ಕೌಟ್ಸ್. ಗೈಡ್ಸ್ ಘಟಕವು ಆಯೋಜಿಸಿದ ಈ ಸ್ಪರ್ಧೆಯಲ್ಲಿ ತಾಲೂಕಿನ ಬನ್ನಿಸ್ ಕಬ್ ಬುಲ್ ಬುಲ್ ಸ್ಕೌಟ್ ಗೈಡ್ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿ ಗಳು ರಾಜ್ಯ ಸಂಸ್ಥೆಯ ಸೂಚನೆಯಂತೆ ಉಡುಪಿ ಜಿಲ್ಲಾ ಸಂಸ್ಥೆಯ ಮಾರ್ಗದರ್ಶನದಂತೆ ತಾಲೂಕಿನ ಸ್ಕೌಟ್ಸ್ ಗೈಡ್ಸ್ ಶಿಕ್ಷಕ ಬಂಧುಗಳಿಂದ ಯಶಸ್ವಿಯಾಗಿ ಮೂಡಿತ್ತು.

ಸ್ಫರ್ಧೆಯ ಬನ್ನಿಸ್ ವಿಭಾಗದಲ್ಲಿ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನವನ್ನು ವರ್ಧಮಾನ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನವನ್ನು ಪಡೆಯಿತು. ಕಬ್ ವಿಭಾಗದಲ್ಲಿ ವರ್ದಮಾನ್ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ದ್ವಿತೀಯ ಸ್ಥಾನವನ್ನು ಜೇಸಿಸ್ ಆಂಗ್ಲ. ಮಾದ್ಯಮ ಶಾಲೆ ತೃತೀಯ ಸ್ಥಾನವನ್ನು ಶ್ರೀ ಶ್ರೀ ರವಿಶಂಕರ ಆಂಗ್ಲ ಮಾದ್ಯಮ ಶಾಲೆ ಪಡೆಯಿತು. ಬುಲ್ ಬುಲ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಜೇಸಿಸ್ ಆಂಗ್ಲ ಶಾಲೆ ದ್ವಿತೀಯ ಸ್ಥಾನವನ್ನು ವರ್ಧಮಾನ ಆಂಗ್ಲ ಮಾಧ್ಯಮ ಶಾಲೆ ತೃತೀಯ ಸ್ಥಾನವನ್ನು ಶ್ರೀ. ಶ್ರೀ ರವಿಶಂಕರ ಆಂಗ್ಲ ಮಾಧ್ಯಮ ಶಾಲೆ ಪಡೆಯಿತು. ಸ್ಕೌಟ್ ವಿಭಾಗದಲ್ಲಿ. ಪ್ರಥಮ ಸ್ಥಾನವನ್ನು ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನವನ್ನು ಶ್ರೀ ಶ್ರೀ ರವಿಶಂಕರ ಆಂಗ್ಲ. ಮಾಧ್ಯಮ ಶಾಲೆ ತೃತೀಯ ಸ್ಥಾನವನ್ನು ಭುವನೇಂದ್ರ ವಿದ್ಯಾಶಾಲಾ ಪ್ರೈಮರಿ ಶಾಲೆ ಪಡೆಯಿತು. ಗೈಡ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಭುವನೇಂದ್ರ ವಿದ್ಯಾಶಾಲಾ ಪ್ರೈಮರಿ ಶಾಲೆ ದ್ವಿತೀಯ ಶ್ರೀ ಶ್ರೀ ರವಿಶಂಕರ ಆಂಗ್ಲ ಮಾಧ್ಯಮ ಶಾಲೆ ತೃತೀಯ ಸ್ಥಾನವನ್ನು ಜೇಸಿಸ್ ಆಂಗ್ಲ. ಮಾಧ್ಯಮ ಶಾಲೆ ಪಡೆಯಿತು. ರೇಂಜರ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರು ಪಡೆಯಿತು‌ ಇದರಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳು.ಉಡುಪಿ ಜಿಲ್ಲಾ ಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸಲಿವೆ.

ಅಲ್ಲದೇ ಶ್ರೀಮದ್ ಭುವನೇಂದ್ರ. ಕನ್ನಡ ಮತ್ತು ಆಂಗ್ಲ. ಮಾಧ್ಯಮ ಪ್ರೌಢ ಶಾಲೆ ಎಸ್ ವಿ ಟಿ ಕನ್ನಡ ಮತ್ತು ಆಂಗ್ಲ. ಮಾಧ್ಯಮ ಪ್ರೌಢ ಶಾಲೆ ಜ್ಞಾನಸುಧಾ ಪಿ ಯು ಕಾಲೇಜು ಶ್ರೀ ಭುವನೇಂದ್ರ ರೆಸಿಡೆನ್ಸಿಯ್ ಶಾಲೆ ಎಸ್ ಎನ್ ವಿ ಪ್ರೈಮರಿ ಮತ್ತು ಹೈಸ್ಕೂಲು ಸಂತ ಮರಿಯಾ ಆಂಗ್ಲ. ಮಾಧ್ಯಮ ಶಾಲೆ ಸಂತ ಜೊಸೇಫಾ ಆಂಗ್ಲ. ಮಾಧ್ಯಮ ಶಾಲೆ ಬೆಳ್ಳಣ್. ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಸಚ್ಚರಿಪೇಟೆ ಸರಕಾರಿ ಹಿರಿಯ.ಪ್ರಾಥಮಿಕ ಕಾಬೆಟ್ಟು ತಂಡಗಳೂ ಭಾಗವಹಿಸಿದ್ದವು ಈ ಗೀತಾ ಗಾಯನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಸೇರಿ ಸುಮಾರು ಮುನ್ನೂರ ಹದಿನೈದು ಮಂದಿ ಭಾಗವಹಿಸಿದ್ದರು.

ಕಾರ್ಯಕ್ರಮದ ಕುರಿತಂತೆ ಕಾರ್ಕಳ ಸ್ಥಳೀಯ ಸಂಸ್ಥೆ ಅಧ್ಯಕ್ಷ ಶ್ರೀ ಎಂ ಕೆ ವಿಜಯ ಕುಮಾರ್ ಹರ್ಷ ವ್ಯಕ್ತಪಡಿಸಿ ಶುಭಾಶಯ ಕೋರಿದ್ದರು.

ಸ್ಫರ್ಧಾ ಕಾರ್ಯಕ್ರಮವನ್ನು ಜೊತೆ ಕಾರ್ಯದರ್ಶಿ ಸೀಮಾ ಕಾಮತ್ ಹಾಗೂ ಗೈಡ್ ಶಿಕ್ಷಕಿ ಇಂದಿರಾ ಪಿ ನಾಯಕ್ ನಿರ್ವಹಿಸಿದರು.

ತಾಲೂಕಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಬಂಧುಗಳ ಸಂಪೂರ್ಣ ಸಹಕಾರದಿಂದ ಯಶಸ್ಸುಗೊಂಡಿತು. ಶ್ರೀಮದ್ ಭುವನೇಂದ್ರ ಪ್ರೌಢಶಾಲೆ ಹಾಗೂ ಶ್ರೀ ಭುವನೇಂದ್ರ ವಿದ್ಯಾ ಶಾಲಾ ಮುಖ್ಯ ಶಿಕ್ಷಕರು ಶಿಕ್ಷಕ ಬಂಧುಗಳು ಹಾಗೂ ಶಿಕ್ಷಕೇತರ ಬಂಧುಗಳು ಸಹಕರಿಸಿದರು .ಕಾರ್ಯಕ್ರಮ ಯಶಸ್ವಿಯಾಗಿ ಸುಸಂಪನ್ನಗೊಂಡಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page