ಕಾರ್ಕಳ: ದೇವಸ್ಥಾನಕ್ಕೆ ಎಂದು ಹೋಗಿ ಹಿಂತಿರುಗುವ ವೇಳೆ ಮಹಿಳೆಯ ಬಳಿ ವಿಳಾಸ ಕೇಳುವ ನೆಪದಲ್ಲಿ ಬಂದು ಚಿನ್ನದ ಸರ ಎಗರಿಸಿದ ಘಟನೆ ಕಾರ್ಕಳ ಪೊಲೀಸ್ ಠಾಣೆ ವ್ಯಾಪ್ತಿಯ ಕಾಂತಾವರದಲ್ಲಿ ನಡೆದಿದೆ.
ಮಹಿಳೆ ಗೋಪಿ (66) ಇವರ ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ಮೌಲ್ಯದ ಚಿನ್ನದ ಸರವನ್ನು ವ್ಯಕ್ತಿಯೊಬ್ಬ ವಿಳಾಸ ಕೇಳುವ ನೆಪದಲ್ಲಿ ಬಂದು, ಕುತ್ತಿಗೆಯಲ್ಲಿದ್ದ ಚೈನನ್ನು ಬಲವಂತವಾಗಿ ಎಳೆದಿದ್ದು ಈ ಸಂದರ್ಭದಲ್ಲಿ ಮಹಿಳೆಯ ಕೈ, ಕುತ್ತಿಗೆ ,ತೋಳಿಗೆ ಗಾಯಗಳಾಗಿರುತ್ತದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.