ಬೆಳೆಯುವ ಹಂತದಲ್ಲಿ ಮಕ್ಕಳಿಗೆ ನೀಡುವ ಸಂಸ್ಕಾರಗಳು, ಭವಿಷ್ಯವನ್ನು ರೂಪಿಸುತ್ತದೆ: ವಸಂತ್ ಕುಮಾರ್

ಕಾರ್ಕಳ ವರ್ಧಮಾನ ಶಿಕ್ಷಣ ಹಾಗೂ ರೊಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ ರಕ್ಷಾಬಂಧನ ಆಚರಣೆ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಿಂಬ ಪ್ರಕಾಶನ ಮಾಧ್ಯಮ ಸಮೂಹ ಸಂಸ್ಥೆಗಳ ಮಾಲಕರಾದ ವಸಂತ್ ಕುಮಾರ್ ಭಾಗವಹಿಸಿ ರಕ್ಷಾಬಂಧನ ಹಾಗೂ ಬದುಕಿನ ಮಹತ್ವಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪತ್ರಿಕೋದ್ಯಮ ಹಾಗೂ ಸಮಾಜ ಸೇವೆಯನ್ನು ಮನಗಂಡು ಸಂಸ್ಥೆಯ ವತಿಯಿಂದ ವಸಂತ್ ಕುಮಾರ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಚಂದ್ರರಾಜ ಅತಿಕಾರಿ ಕೃಷಿಕ. ಇರುವತ್ತೂರು, ನಟರಾಜ್ ಜೈನ್ ಕಾಂಟ್ರಾಕ್ಟರ್ ಪಿ. ಡಬ್ಲ್ಯೂ. ಡಿ. ಮೂಡಬಿದ್ರೆ ಹಾಗೂ ರೋಟರಾಕ್ಟ್ ಅಧ್ಯಕ್ಷರಾದ ಸಂದೇಶ್ ಇವರು ಭಾಗವಹಿಸಿ ಮಕ್ಕಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾ ಕೆ ಹೆಗ್ಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅತಿಥಿ ಅಭ್ಯಾಗತರನ್ನು ಸಂಸ್ಥೆಯ ಸಂಚಾಲಕರಾದ ಕುಮಾರಯ್ಯ ಹೆಗ್ಡೆ ಯವರು ಅಭಿನಂದಿಸಿದರು. ಕರ್ತವ್ಯ ಜೈನ್ ಸ್ವಾಗತಿಸಿದರು. ಶಿಕ್ಷಕಿ ಪ್ರಿಯಾ ನಾಯಕ್ ಅತಿಥಿ ಪರಿಚಯ ನೆರವೇರಿಸಿ ಕೊಟ್ಟರು. ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಣೆಗೈದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು ಹಾಗೂ ರೋಟರಾಕ್ಟ್ ಸದಸ್ಯರು ಉಪಸ್ಥಿತರಿದ್ದರು.