26.9 C
Udupi
Wednesday, March 11, 2026
spot_img
spot_img
HomeBlogಕಾರ್ಕಳ : ಮಹಾವೀರ ಫ್ರೆಂಡ್ಸ್ ಕ್ಲಬ್ (ರಿ.) ಇದರ ರಜತ ಸಂಭ್ರಮದ ಸಲುವಾಗಿ ತಾಲೂಕು ಮಟ್ಟದ...

ಕಾರ್ಕಳ : ಮಹಾವೀರ ಫ್ರೆಂಡ್ಸ್ ಕ್ಲಬ್ (ರಿ.) ಇದರ ರಜತ ಸಂಭ್ರಮದ ಸಲುವಾಗಿ ತಾಲೂಕು ಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾಟ

ದಿನಾಂಕ 16.11.2025ನೇ ಆದಿತ್ಯವಾರದಂದು ಲಯನ್ಸ್ ಕ್ಲಬ್ ಕಾರ್ಕಳ ಮತ್ತು ಲಿಯೋ ಕ್ಲಬ್ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಮಹಾವೀರ ಫ್ರೆಂಡ್ಸ್ ಕ್ಲಬ್ (ರಿ.) ಇದರ ರಜತ ಸಂಭ್ರಮದ ಸಲುವಾಗಿ ಕಾರ್ಕಳ ತಾಲೂಕು ಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾಟ ನಡೆಯಲಿದೆ.

ಶ್ರೀಮತಿ ಜ್ಯೋತಿ ಜೆ ಪೈ ಪಂದ್ಯಾಟದ ಉದ್ಘಾಟನೆ ಮಾಡಲಿದ್ದು ಲಯನ್| ರಾಜಾರಾಮ ಕಡಂಬ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಯನ್| ದಿನೇಶ್ ಕುಮಾರ್, ಶ್ರೀಮತಿ ವಿದ್ಯಾ ಉದಯ ಶೆಟ್ಟಿ ಕುಕ್ಕುಂದೂರು ಕಾರ್ಕಳ, ವಿಜಯರಾಜ ಶೆಟ್ಟಿ, ಶಶಿಕಾಂತ್ ಶೆಟ್ಟಿ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ.

ಮಹಾವೀರ ಫ್ರೆಂಡ್ಸ್ ಮೈದಾನ ಹುಡ್ಕೋಕಾಲನಿ ಯಲ್ಲಿ ಬೆಳಿಗ್ಗೆ ಗಂಟೆ 09:00 ರಿಂದ ಪಂದ್ಯಾಟ ನಡೆಯಲಿದ್ದು ಪಂದ್ಯಾಟದಲ್ಲಿ ಪ್ರಥಮ ಬಹುಮಾನ 5,000 ರೂ. ನಗದು ಮತ್ತು ಟ್ರೋಫಿ, ದ್ವಿತೀಯ 3,000 ರೂ. ನಗದು ಮತ್ತು ಟ್ರೋಫಿ, ತೃತೀಯ 2,000 ರೂ. ನಗದು ಮತ್ತು ಟ್ರೋಫಿ ದೊರೆಯಲಿದೆ.

ಸೂಚನೆ: ಮುಂಚಿತವಾಗಿ ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಸ್ಥಳ: ಮಹಾವೀರ ಫ್ರೆಂಡ್ಸ್ ಹುಡ್ಕೋಕಾಲನಿ

ಮೊ.ನಂ.: 9342326590 / 9035886393 / 7760470123

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page