
ಕಾರ್ಕಳದಲ್ಲಿ ಇತ್ತಿಚೆಗೆ ನಲ್ಲೂರು ಎಂಬ ಗ್ರಾಮದಲ್ಲಿ ಗೋ ಮಾಂಸ ಮಾರಾಟ ದಂಧೆ ಮತ್ತು ತೆಳ್ಳರ್ ಅಲ್ಲಿ ವನ್ಯ ಜೀವಿ ಆಗಿರುವ ಜಿಂಕೆ ಮಾಂಸ ಪತ್ತೆ ಆಗಿದ್ದು ನಮ್ಮ ಹಿಂದೂ ಕಾರ್ಯಕರ್ತರ ನಿರಂತರ ಪ್ರಯತ್ನ ಮತ್ತು ಪೊಲೀಸ್ ಇಲಾಖೆಯ ಯಶಸ್ವಿ ಕಾರ್ಯಚರಣೆ ಸಮಾಜಕ್ಕೆ ಧೈರ್ಯವನ್ನು ತುಂಬಿದೆ.
ನಮ್ಮ ಸುತ್ತಮುತ್ತಲು ಏನು ಆಗುತ್ತಿದೆ ಎಂಬ ಅರಿವೇ ಇಲ್ಲದೆ ಅದೆಷ್ಟೋ ಜನರು ನಮ್ಮ ಜೀವನ ನೆಮ್ಮದಿ ಅಲ್ಲಿ ಇದ್ದರೆ ಸಾಕು ಎಂದು ಜೀವಿಸುತ್ತಿದ್ದರೆ ನಮ್ಮ ಜೀವದ ಹಂಗು ತೊರೆದು ಗೋ ಹತ್ಯೆ ವಿರುದ್ಧ ಧ್ವನಿ ಎತ್ತುವ ಪ್ರತಿಯೊಬ್ಬ ಕಾರ್ಯಕರ್ತರ ಶ್ರಮದ ಫಲವಾಗಿ ಅದೆಷ್ಟೋ ಗೋ ಪಾಲಕರು ಇಂದು ನೆಮ್ಮದಿ ಆಗಿ ಇದ್ದಾರೆ.ಕಾರ್ಕಳ ಗ್ರಾಮಾಂತರ ಪೊಲೀಸ್ ಇಲಾಖೆಯ ಶ್ರಮವನ್ನು ಕೂಡ ನಾವು ಮೆಚ್ಚುಲೇ ಬೇಕು. ಅವರ ಕೂಡಲೇ ಸ್ಪಂದನೆ ಇಂದ ಸಮಾಜದಲ್ಲಿ ಧೈರ್ಯ ಹಾಗೂ ಇಲಾಖೆಯ ಮೇಲೆ ಗೌರವ ಹೆಚ್ಚಿದೆ ಎಂದು ರಮಿತಾ ಸೂರ್ಯವಂಶಿ ಅವರು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.

































