
ಕಾರ್ಕಳ ಪೋಲಿಸ್ ಉಪ ವಿಭಾಗದ ನೂತನ ಡಿವೈಎಸ್ಪಿ ಯಾಗಿ ,ಬೆಳ್ಳಿಯಪ್ಪ ಕೆ.ಯು ನೇಮಕಗೊಂಡಿದ್ದಾರೆ.
ಇವರು ಈ ಹಿಂದೆ ಐ.ಜಿ.ಪಿ ಪಶ್ಚಿಮ ವಲಯ ಕಛೇರಿ ಮಂಗಳೂರಿನಲ್ಲಿ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಾರ್ಕಳದ ಎಎಸ್‌ಪಿಯಾಗಿದ್ದ ಡಾ. ಹರ್ಷ ಪ್ರಿಯಂವದ ಅವರಿಗೆ ಬೆಂಗಳೂರಿನ ಸಿಐಡಿ ವಿಭಾಗದ ಎಸ್ಪಿ ಯಾಗಿ ಬಡ್ತಿ ನೀಡಿ ವರ್ಗಾಯಿಸಿದ ಹಿನ್ನೆಲೆಯಲ್ಲಿ, ಈ ನೇಮಕಾತಿ ನಡೆದಿದೆ.






















