ಆಕ್ರೋಶ ವ್ಯಕ್ತಪಡಿಸಿದ ಕುಲಾಲ್ ಯುವ ವೇದಿಕೆ,ಕ್ರಮ ಕೈಗೊಳ್ಳುವಂತೆ ಡಿವೈಎಸ್ಪಿಗೆ ಮನವಿ

ಕಾರ್ಕಳದಲ್ಲಿ ಪುರಸಭಾ ಸದಸ್ಯ ಸೀತಾರಾಮ್ ರವರು ಮಹಾಬಲ ಮೂಲ್ಯ ರ ಮೇಲೆ ಬಡಿಗೆಯಲ್ಲಿ ಮಾಡಿರುವ ಹಲ್ಲೆ ಪ್ರಕರಣ ಬಗ್ಗೆ ಸಾಮಾಜಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕುಲಾಲ ಯುವ ವೇದಿಕೆ ಆಕ್ರೋಶ
ಈ ಘಟನೆಯನ್ನು ಕಂಡ ಕುಲಾಲ ಯುವ ವೇದಿಕೆ ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದೆ.ಇಂದು ಕಾರ್ಕಳ ಪೊಲೀಸ್ ಠಾಣೆಯಲ್ಲಿ ಡಿ ವೈ ಎಸ್ ಪಿ ಅರವಿಂದ ಕಲಗುಜ್ಜಿ, ನಗರ ಠಾಣಾ ಎಸ್ ಐ ಸಂದೀಪ್ ಶೆಟ್ಟಿಯವರಿಗೆ ಈ ಬಗ್ಗೆ ಕ್ರಮ ಕೈ ಗೊಳ್ಳುವಂತೆ ಮನವಿ ಮಾಡಿದೆ.
ಕುಲಾಲ ಯುವ ವೇದಿಕೆಯ ಜಿಲ್ಲಾಧ್ಯಕ್ಷ ದಿವಾಕರ ಬಂಗೇರ, ಕಾರ್ಕಳ ಕುಲಾಲ ಸಂಘದ ಅಧ್ಯಕ್ಷ ಹರೀಶ್ಚಂದ್ರ ಕುಲಾಲ್, ಕುಲಾಲ ಯುವ ವೇದಿಕೆ ತಾಲೂಕು ಅಧ್ಯಕ್ಷ ಉದಯ ಕುಲಾಲ್ ಹೆರ್ಮುಂಡೆ ಕುಲಾಲ್ ಸಂಘದ ಕಾರ್ಯದರ್ಶಿ ಹೃದಯ ಕುಲಾಲ್, ಹೆಬ್ರಿ ಕುಲಾಲ ಸಂಘದ ಅಧ್ಯಕ್ಷ ಸುರೇಂದ್ರ ಕುಲಾಲ್ ವರಂಗ, ಕಾರ್ಕಳ ಕುಲಾಲ ಯುವ ವೇದಿಕೆಯ ಕಾರ್ಯದರ್ಶಿ ಸಂದೇಶ್, ಮತ್ತಿತರ ಯುವ ವೇದಿಕೆ ಸದಸ್ಯರು ಮನವಿ ಸಂದರ್ಭದಲ್ಲಿದ್ದರು.ತಕ್ಷಣವೇ ಆರೋಪಿಯನ್ನು ಬಂಧನ ಮಾಡದಿದ್ದರೆ ತಾಲೂಕಿನಾದ್ಯoತ ತೀವ್ರ ಹೋರಾಟ ಮಾಡುವುದಾಗಿ ಯುವ ವೇದಿಕೆ ಎಚ್ಚರಿಸಿದೆ.
ಇನ್ನು ಈ ವಿಚಾರ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದ್ದು, ಕಾರ್ಕಳ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು 24 ಗಂಟೆಗಳ ಒಳಗೆ ಬಂಧಿಸಲಾಗಿದೆ. ಕಾರ್ಕಳ ನಗರ ಠಾಣೆಯ ಪೊಲೀಸರ ಕ್ಷಿಪ್ರ ಕಾರ್ಯಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.



















