30.5 C
Udupi
Saturday, May 9, 2026
spot_img
spot_img
HomeBlogಕಾರ್ಕಳ: ನಡಿಗುಡ್ಡೆ ಮೂಡುಕರೆ ಶ್ರೀ ವ್ಯಾಘ್ರ ಚಾಮುಂಡಿ ದೇವಸ್ಥಾನ ಮಠದಕೆರೆ ಸಾಣೂರು

ಕಾರ್ಕಳ: ನಡಿಗುಡ್ಡೆ ಮೂಡುಕರೆ ಶ್ರೀ ವ್ಯಾಘ್ರ ಚಾಮುಂಡಿ ದೇವಸ್ಥಾನ ಮಠದಕೆರೆ ಸಾಣೂರು

ಜೀರ್ಣೋದ್ಧಾರ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವ

ದಿನಾಂಕ 10-04-2025 ರಿಂದ 11-04-2025 ರವರೆಗೆ ನಡಿಗುಡ್ಡೆ ಮೂಡುಕರೆ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದ ಜೀರ್ಣೋದ್ಧಾರ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವವು ನಡೆಯಲಿದೆ.

ದಿನಾಂಕ 10.04.2025ನೇ ಗುರುವಾರದಂದು ಸಾಯಂಕಾಲ ಸಂಜೆ 5:00ಯಿಂದ ಶಿಲ್ಪ ಪೂಜೆ, ಋತ್ವಿಜರ ಸ್ವಾಗತ, ಪ್ರಸಾದ ಪರಿಗ್ರಹ ದೇವತಾ ಪ್ರಾರ್ಥನೆ, ಪಂಚಗವ್ಯ ಪುಣ್ಯಹವಾಚನ, ಪ್ರಸಾದ ಶುದ್ದಿ, ವಾಸ್ತು ಪೂಜೆ, ರಾಕ್ಷೋಘ್ನ ಹೋಮ, ಪ್ರಕಾರ ಬಲಿ, ಬಿಂಬಾದಿವಾಸ ನಡೆಯಲಿದೆ.

ದಿನಾಂಕ 11-04-2025 ಶುಕ್ರವಾರದಂದು ಬೆಳಗ್ಗೆ 7:00 ಯಿಂದ ಸ್ವಸ್ತಿ ಪಂಚಗವ್ಯ ದೇವನಾಂದಿ ತ್ರಿನಾಳಿಕೇರ ಗಣಪತಿ ಹೋಮ, ನವಗ್ರಹ ಪೂಜೆ, ಪಂಚವಿಂಶತಿ, ಕಳಶ ಪ್ರತಿಷ್ಠೆ, ಪ್ರಧಾನ ಪ್ರತಿಷ್ಠಾ ಹೋಮ, ಪ್ರಾಯಶ್ಚಿತ ಹೋಮ ನಡೆಯಲಿದ್ದು ಬಳಿಕ ಬೆಳಿಗ್ಗೆ 9:25 ರೈ ನಂತರ ವ್ಯಾಘ್ರ ಚಾಮುಂಡಿ ದೈವದ ಪುನರ್ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ಪರ್ವಸೇವೆ, ಪ್ರಸನ್ನ ಪೂಜೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ರಾತ್ರಿ 9:00ಗೆ ನೇಮೋತ್ಸವ ನಡೆಯಲಿದೆ.

ಈ ದೈವದ ನೇಮೋತ್ಸವಕ್ಕೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧರ್ಮ ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ತನು-ಮನ ಧನಗಳಿಂದ ಸಹಕರಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ದೈವಸ್ಥಾನದ ಕಾರ್ಯಕಾರಿ ಸಮಿತಿ, ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಆಹ್ವಾನಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page