29.1 C
Udupi
Sunday, April 26, 2026
spot_img
spot_img
HomeBlogಕಾರ್ಕಳ ಟೈಗರ್ಸ್ :- ಪೌಷ್ಟಿಕ ಆಹಾರ ವಿತರಣ ಕಾರ್ಯಕ್ರಮ

ಕಾರ್ಕಳ ಟೈಗರ್ಸ್ :- ಪೌಷ್ಟಿಕ ಆಹಾರ ವಿತರಣ ಕಾರ್ಯಕ್ರಮ

ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರಕಾರದ ಆಶಯದಂತೆ 2025 ಕ್ಕೆ ಕ್ಷಯ ಮುಕ್ತ ಭಾರತ ಮಾಡುವ ದಿಟ್ಟ ಸಂಕಲ್ಪದಲ್ಲಿ ಮಾನ್ಯ ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನದ ಅಂಗವಾಗಿ ಕಾರ್ಕಾಳ ತಾಲೂಕಿನ ಆಯ್ದ 11 ಕ್ಷಯರೋಗಿಗಳಿಗೆ ನಿಕ್ಷಯ್ ಮಿತ್ರ ಯೋಜನೆಯ ಮೂಲಕ ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ವತಿಯಿಂದ ಪೌಷ್ಟಿಕ ಆಹಾರದ ಕಿಟ್ ಅನ್ನು ವಿತರಿಸಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ. ಸಂದೀಪ್ ಕುಡ್ವ ಇವರು ಪ್ರಸ್ತಾವಿಕ ಮಾತನಾಡಿ ಕ್ಷಯರೋಗ ಹಾಗೂ ನಿಕ್ಷಯ್ ಮಿತ್ರ ಯೋಜನೆಯ ಪೌಷ್ಟಿಕ ಆಹಾರದ ಮಹತ್ವದ ಕುರಿತು ಮಾಹಿತಿ ನೀಡಿದರು ಹಾಗೂ ಕ್ಷಯಮುಕ್ತ ಗ್ರಾಮ ಪಂಚಾಯತ್ ಮಾಡಲು ಪೌಷ್ಟಿಕ ಆಹಾರದ ಕಿಟ್ ವಿತರಣೆ ಕೂಡ ಒಂದು ಮಾನದಂಡವಾಗಿದ್ದು ಈ ನಿಟ್ಟಿನಲ್ಲಿ ಕಾರ್ಕಳ ಟೈಗರ್ಸ್ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.ಹಿರಿಯ ಚಿಕಿತ್ಸ ಮೇಲ್ವಿಚಾರಕ ಶ್ರೀ ಶಿವಕುಮಾರ್ ಮಾತನಾಡಿ ಪ್ರಧಾನ ಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನದ ಮಹತ್ವ ಹಾಗೂ ಕಾರ್ಕಳ ತಾಲೂಕಿನಕ್ಷಯರೋಗದ ಸ್ಥಿತಿ ಗತಿಗಳ ಕುರಿತು ಮಾಹಿತಿ ನೀಡಿದರು.

ಕಾರ್ಕಳ ಟೈಗರ್ಸ್ ಕೇಂದ್ರ ಬಿಂದು ಶ್ರೀ ಬೋಳ ಪ್ರಶಾಂತ್ ಕಾಮತ್ ತಂಡದ ಪರವಾಗಿ ಇವರು ಕಾರ್ಕಳ ತಾಲೂಕಿನ ಒಟ್ಟು 11 ಮಂದಿ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಿ ಕ್ಷಯರೋಗ ಮುಕ್ತ ಭಾರತ ಪರಿಕಲ್ಪನೆಗೆ ನಮ್ಮ ತುಂಬು ಸಹಕಾರ ಯಾವಾಗಲು ಇದೆ ಎಂದು ತಿಳಿಸಿದರು. ಶ್ರೀಮತಿ ರಮಿತ ಶೈಲೇಂದ್ರ ಇವರು ಕಾರ್ಯಕ್ರಮ ನಿರೂಪಿಸಿದರು, ಪ್ರಕಾಶ್ ರಾವ್ ಇವರು ವಂದಿಸಿದರು, ಟೈಗರ್ಸ್ ತಂಡದ ಶೃಂಗಾರ್ ಪ್ರದೀಪ್, ರವಿ ಶೆಟ್ಟಿ, ಶ್ರೀನಾಥ್, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರವೀಣ್ ಹಾಗೂ ಅರುಣ್ ಅವರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page