29.3 C
Udupi
Thursday, April 23, 2026
spot_img
spot_img
HomeBlogಕಾರ್ಕಳ ಜ್ಞಾನಸುಧಾ : ಶಿಕ್ಷಕರ ದಿನಾಚರಣೆಯ ಸಂಭ್ರಮ

ಕಾರ್ಕಳ ಜ್ಞಾನಸುಧಾ : ಶಿಕ್ಷಕರ ದಿನಾಚರಣೆಯ ಸಂಭ್ರಮ

ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು
ಆಚರಿಸಲಾಯಿತು. ಬೆಂಗಳೂರಿನ ಭಾರತ್ ಸೇವಾ ದಳದ ಸೆಂಟ್ರಲ್ ಕಮಿಟಿಯ ಸದಸ್ಯರಾದ ರೊಟೇರಿಯನ್ ತಿಮ್ಮಪ್ಪ ಶೆಟ್ಟಿ ಆರೂರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತ ಅತ್ಯಂತ ಶ್ರೇಷ್ಟ ಸಂಸ್ಕಾರವುಳ್ಳ ಪುಣ್ಯ ಭೂಮಿ. ಜನನಿಯೇ ಮೊದಲ ಗುರುವಾದರೆ ನಮಗೆ ಮಾರ್ಗದರ್ಶನ ಮಾಡಿದವರೆಲ್ಲ ಗುರುಗಳು. ಕುಂಬಾರ ಮಣ್ಣಿನಿಂದ ಮಡಕೆ ಮಾಡುವಂತೆ ಶಿಕ್ಷಕರು ಮಕ್ಕಳನ್ನು ತಿದ್ದಿ ತೀಡಿ ಜೀವನ ರೂಪಿಸುತ್ತಾರೆ ಎಂದು ಹೇಳಿದರು. ಇತಿಹಾಸ ತಿಳಿಯದವ, ವರ್ತಮಾನ ಅನುಭವಿಸದವ ಭವಿಷ್ಯ ಬರೆಯಲಾರ ಎಂದರು. ಕಾರ್ಕಳ ಪುಲ್ಕೇರಿ ಶ್ರೀ ರಾಮಪ್ಪ ಅನುದಾನಿತ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿಯಾದ ತಂಗಿ ಎಸ್ ಸುವರ್ಣ, ಕಾರ್ಕಳ ಕೆ.ಎಂ.ಇ.ಎಸ್ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಫರೀದಾ ಖಾನ್ ಮತ್ತು ಹೆಕ್ಕಡ್ಕದ ಸರಕಾರಿ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಉಷಾ ಎಸ್. ರಾವ್ ಅವರನ್ನು ಸನ್ಮಾನಿಸಿ ಗುರುವಂದನೆಯನ್ನು ಸಲ್ಲಿಸಲಾಯಿತು. ಸAಸ್ಥೆಯ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ಎಂ. ಕೊಡವೂರು, ಉಪ ಪ್ರಾಂಶುಪಾಲೆ ವಾಣಿ.ಕೆ. ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ, ಡೀನ್ ಸ್ಟುಡೆಂಟ್ಸ್ ಅಫೇರ್ ಶಕುಂತಲಾ ಸುವರ್ಣ, ಅಕಾಡೆಮಿಕ್ ಅಡ್ವೆöÊಸರ್ ಶಾರದಾ ಅಂಬರೀಶ್, ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು, ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಉಷಾ ರಾವ್ ಯು ಉಪಸ್ಥಿತರಿದ್ದರು. ಒಂಭತ್ತನೆಯ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥಿಸಿ, ಆಂಗ್ಲಭಾಷಾ ಶಿಕ್ಷಕಿ ದಿವ್ಯಾ ಕೆ ನಿರೂಪಿಸಿ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page