
ಕಾರ್ಕಳ: ಬೆರ್ಮೆರ್ ಬೈಧ್ಯೆರುಗಳ ಆರಾಧಕರ ಸೇವಾ ಪ್ರತಿಷ್ಠಾನದ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುವ ಉದ್ದೇಶದಿಂದ ಜು.19ರಂದು ಸಭೆ ಆಯೋಜಿಸಲಾಗಿದೆ.
ಕಾರ್ಕಳದ ಕುಕ್ಕುಂದೂರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭವನದಲ್ಲಿ ಭಾನುವಾರ ನಡೆಯಲಿರುವ ಸಭೆಯಲ್ಲಿ ಮುಂದಿನ ವಿವಿಧ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲು ಸಭೆ ಕರೆಯಲಾಗಿದೆ.
ಹಿರಿಯರ ಮಾರ್ಗದರ್ಶನ, ಕಿರಿಯರ ಸಹಕಾರ, ಗುತ್ತು-ಬರ್ಕೆಯವರ ಆಡಳಿತ ಹಾಗೂ ಪೂ ಪೂಜಾನೆ ಪೂಜಾರಿಗಳು ಮತ್ತು ದರ್ಶನ ಪೂಜಾರಿಗಳ ಸಹಭಾಗಿತ್ವದೊಂದಿಗೆ ಸೇವಾ ಪ್ರತಿಷ್ಠಾನವನ್ನು ಮುನ್ನಡೆಸುವ ಸಂಕಲ್ಪ ವ್ಯಕ್ತಪಡಿಸಲಾಗಿದೆ.
ಸಭೆಯಲ್ಲಿ ಗರಡಿ ಪೂಜಾರಿಗಳು, ದರ್ಶನ ಪೂಜಾರಿಗಳು, ಗುತ್ತು-ಬರ್ಕೆಯವರು ಹಾಗೂ ಗರಡಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೈಧ್ಯ ಕುಲದ ಆರಾಧನಾ ಅಭಿವೃದ್ಧಿಗೆ ಕೈಜೋಡಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
















































