
ಕಾರ್ಕಳ: ರಾಜೇಶ್ವರಿ ಎಂಬ ಮಹಿಳೆಯೊಬ್ಬರಿಗೆ ಚಿನ್ನದ ವ್ಯಾಪಾರದಲ್ಲಿ ಹೂಡಿಕೆಯಲ್ಲಿ ಅಧಿಕ ಲಾಭ ಅಂಶದ ಆಮಿಷ ಒಡ್ಡಿ ಲಕ್ಷಾಂತರ ರೂ. ವಂಚಿಸಿದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಾಟ್ಸಪ್ ಮೂಲಕ ಗೋಲ್ಡ್ ಮೈನಿಂಗ್ ಟ್ರೇಡಿಂಗ್ ಮಾಡಿದ್ದಲ್ಲಿ ಅಧಿಕ ಲಾಭ ಬರಲಿದೆ ಎಂದು ಅಪರಿಚಿತರೊಬ್ಬರು ಸಂದೇಶ ಕಳುಹಿಸಿದ್ದು ಆರಂಭಿಕ ಹಂತದಲ್ಲಿ ಲಾಭಾಂಶವನ್ನು ನೀಡಿ ಮಹಿಳೆಗೆ ಮತ್ತಷ್ಟು ನಂಬಿಕೆ ಬರುವಂತೆ ಮಾಡಿ ಬಳಿಕ ಬೇರೆ ಬೇರೆ ಖಾತೆ ಮೂಲಕ ಹಂತ ಹಂತವಾಗಿ 66,27,634 ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಇದೀಗ ಹೂಡಿಕೆ ಮಾಡಿರುವ ಹಣವನ್ನು ವಾಪಸ್ಸು ನೀಡದೆ, ಲಾಭಾಂಶವನ್ನು ನೀಡದೆ ವಂಚಿಸಲಾಗಿದೆ ಎಂದು ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.





















