
ಕಾರ್ಕಳ: ಕಾರ್ಕಳ ಹೋಬಳಿ ಈದು ನೂರಾಳ್‌ಬೆಟ್ಟು ಗ್ರಾಮದ ಗ್ರಾಮಸಹಾಯಕ ತಾತ್ಕಾಲಿಕ ಹುದ್ದೆ ಖಾಲಿ ಆಗಿದ್ದು, ಸದ್ರಿ ಗ್ರಾಮದ ಗ್ರಾಮಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಅದೇ ಗ್ರಾಮದವರಾಗಿರಬೇಕು. ಅದೇ ಗ್ರಾಮದಿಂದ ಅರ್ಜಿ ಬಾರದಿದ್ದಲ್ಲಿ ನೆರೆಯ ಗ್ರಾಮದಿಂದ ಬಂದ ಅರ್ಜಿಗಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಅಭ್ಯರ್ಥಿಯು ಗ್ರಾಮದ ಪರಿಪೂರ್ಣ ಮಾಹಿತಿ ಹೊಂದಿರಬೇಕು. ಈ ಮೊದಲು ಸ್ಥಳೀಯ ಕಚೇರಿಯಲ್ಲಿ ಕೆಲಸ ನಿರ್ವಹಿಸಿದ ಅನುಭವವಿದ್ದಲ್ಲಿ ಖಾತ್ರಿ ಪಡೆಸಿಕೊಂಡು ಅರ್ಹ ಅಭ್ಯರ್ಥಿಗಳನ್ನು ನೇಮಿಸಲಾಗುವುದು. ನೇಮಕಾತಿಯ ಅಂತಿಮ ನಿರ್ಧಾರ ತಹಸೀಲ್ದಾರರದ್ದೇ ಆಗಿದೆ. ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ತಹಸೀಲ್ದಾರರ ಕಚೇರಿಯನ್ನು ಸಂಪರ್ಕಿಸಬಹುದು.
ಫೆ.20 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ.













