
ಕಾರ್ಕಳ ವಿಧಾನಸಭಾ ಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಶಾಸಕರಾದ ವಿ ಸುನಿಲ್ ಕುಮಾರ್‌ರವರ ಪ್ರಸ್ತಾವನೆ ಮೇರೆಗೆ ಸರ್ಕಾರದಿಂದ ರೂ.3 ಕೋಟಿ ಅನುದಾನ ಮಂಜೂರಾಗಿರುತ್ತದೆ.
ಕಾರ್ಕಳದ ಕೆಲವು ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಂತೆ ಕಾರ್ಕಳ ತಾಲೂಕಿನ ನೀರೆ ಗ್ರಾಮದ ಸಾಗು ರಸ್ತೆ, ಕಣಜಾರು ಗ್ರಾಮದ ಮಾವಿನಕಟ್ಟೆ ರಸ್ತೆ, ನಿಟ್ಟೆ ಕಾಲೇಜು ಬಳಿ ಇರುವ ನರಂಗೊಟ್ಟು ರಸ್ತೆ, ಈದು ಗ್ರಾಮದ ಬನ್ನಡ್ಕ ರಸ್ತೆ, ಬೆಳ್ಮಣ್ ಗ್ರಾಮದ ಜಂತ್ರ 5 ಸೆನ್ಸ್ ಕಾಲನಿ ರಸ್ತೆ, ಮುಡಾರು ಗ್ರಾಮದ ಕರ್ಮರ್‌ಕಟ್ಟೆಯಿಂದ ಅಚ್ಚೊಟ್ಟು ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಂಜೂರಾಗಿರುತ್ತದೆ.
ಸದರಿ ರಸ್ತೆಗಳ ಕಾಮಗಾರಿ ಕುರಿತಂತೆ ಈಗಾಗಲೇ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಅಂತಿಮ ಹಂತದ ಇಲಾಖಾ ಪ್ರಕ್ರಿಯೆಗಳು ನಡೆಯುತ್ತಿದೆ. ಆದಷ್ಟು ಶೀಘ್ರವಾಗಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕ್ರಮವಹಿಸಲಾಗುವುದು ಎಂದು ಕಾರ್ಕಳ ಶಾಸಕರ ʼವಿಕಾಸʼ ಕಛೇರಿ ಪ್ರಕಟಣೆಯಲ್ಲಿ ತಿಳಿಸಿರುತ್ತದೆ.













