ಧೀಮಹಿಯಲ್ಲಿ ಭಕ್ತರ ಸಂಭ್ರಮ

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಶಂಕರ ಪ್ರತಿಷ್ಠಾನದ ಸದಸ್ಯರೆಲ್ಲರೂ ಭಕ್ತಿ ಪೂರ್ವಕವಾಗಿ ವರಮಹಾಲಕ್ಷ್ಮಿ ಪೂಜೆ ಮತ್ತು ಕುಂಕುಮರ್ಚನೆಯಲ್ಲಿ ಸಂಭ್ರಮಿಸಿದರು.ಜೋಗುಳಬೆಟ್ಟು ಭವಾನಿ ಶಂಕರ್ ರಾಯ ದಂಪತಿಗಳ ನೂತನ ಗೃಹ ಧೀಮಹಿಯಲ್ಲಿ ಸೇರಿದ ಶಂಕರ ಪ್ರತಿಷ್ಠಾನದ ಮಹಿಳಾ ಹಾಗೂ ಪುರುಷ ಸದಸ್ಯರು ಸುಮಾರು ಒಂದು ಗಂಟೆ ಬಜನೆ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ವರಮಹಾಲಕ್ಷ್ಮಿ ಪೂಜೆಯನ್ನು ನಡೆಸಲು ಪ್ರತಿಷ್ಠಾನದ ಉಪಾಧ್ಯಕ್ಷೆ ಶ್ರೀಮತಿ ಸಾವಿತ್ರಿ ಮನೋಹರ್ ಅರಿಂದ ಸಂಕಲ್ಪಗೊಂಡ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತುಪಾವಂಜೆ ದೇವಸ್ಥಾನದ ಯಾಜಿನಿರಂಜನ್ ಭಟ್ ರವರು ಪರೋಹಿತ್ಯ ನಡೆಸಿ ಪೂಜೆಯನ್ನು ಸಾಂಗವಾಗಿ ನಡೆಸಿಕೊಟ್ಟರು. ಪ್ರತಿಷ್ಠಾನದ ಅಧ್ಯಕ್ಷ ಶಿಲ್ಪ ಕೇಶವರವರು ಆಗಮಿಸಿದ ಎಲ್ಲರನ್ನು ಕೃತಜ್ಞತಾಪೂರ್ವಕವಾಗಿ ಹೊಂದಿಸಿದರು ಕಾರ್ಯದರ್ಶಿ ಶ್ರೀ ಸತೀಶ ರಾವ್ ಕರ್ವಾಲ್ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ವತ್ಸಲ ಶಾನ್ಬೋಗ್ ಕಾರ್ಯಕ್ರಮಕ್ಕೆ ಸಹಕರಿಸಿದರು













