
ಕಾಂತಾವರ: ಕಾರ್ಕಳದ ಪ್ರಕೃತಿ ಶಿಕ್ಷಣ ಸಂಸ್ಥೆಯಲ್ಲಿ, LKG ಮತ್ತು UKG ವಿದ್ಯಾರ್ಥಿಗಳಿಗೆ ರೆಡ್ ಡೆ (ಕೆಂಪು ದಿನ)ಬಣ್ಣವ ನೋಡಿ- ಕಲಿ ನಲಿ ಎನ್ನುವ ಒಂದು ಸುಂದರ ಕಾರ್ಯಕ್ರಮವನ್ನು ಕೈಗೊಂಡರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಕ್ರಿಸ್ಪಿನ ಜೆರಾಲ್ಡ ಕ್ರಾಸ್ತರವರು ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಭಾಗವಹಿಸಿದ ಎಲ್ಲ ಮಕ್ಕಳಿಗೂ ಸಿಹಿ ತಿಂಡಿ ಹಂಚಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ, ಶ್ರೀಯುತ ಚಾರ್ಲ್ಸ ಕ್ರಾಸ್ತ ರವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಬಣ್ಣದ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೆಂಪು ಬಣ್ಣದ ಸಂಬಂಧಿಸಿದ ಎಲ್ಲ ರೀತಿಯ ಪರಿಕರಗಳನ್ನು, ಹಣ್ಣುಗಳನ್ನು, ತರಕಾರಿಗಳನ್ನು ಪರಿಚಯಿಸಿದರು. ಅದರ ಜೊತೆಗೆ LKG ಮತ್ತು UKG ವಿದ್ಯಾರ್ಥಿಗಳು ಕೆಂಪು ಬಣ್ಣದ ಉಡುಪುಗಳನ್ನು ಧರಿಸಿ ಆನಂದಿಸಿದರು. ಅಷ್ಟೇ ಅಲ್ಲದೆ ಸ್ಮರಣ ಶಕ್ತಿಗೆ ಸಂಬಂಧಿಸಿದ ಕೆಲವೊಂದು ಆಟೋಟಗಳನ್ನು ಈ ಸಂದರ್ಭದಲ್ಲಿ ಕೈಗೊಳ್ಳಲಾಯಿತು.













