29.3 C
Udupi
Thursday, April 23, 2026
spot_img
spot_img
HomeBlogಕಾರ್ಕಳದ ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷ ಮುಕ್ತನಾದ ಆರೋಪಿ

ಕಾರ್ಕಳದ ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷ ಮುಕ್ತನಾದ ಆರೋಪಿ

ಕಾರ್ಕಳ: ಬೆಳ್ತಂಗಡಿಯ ಗುರುವಾಯನ ಕೆರೆಯ ಶಿವಾಜಿನಗರದ ವಡಿವೇಲು ಎಂಬವರು ಕಾರ್ಕಳದ ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರದ ಶ್ರೀನಿವಾಸ ಎಂಬವರ ವಿರುದ್ಧ ಕೈ ಸಾಲ ಮರುಪಾವತಿಯಾಗಿ ನೀಡಿರುವ 10 ಲಕ್ಷ ರೂ ಮೊತ್ತದ ಚೆಕ್ಕನ್ನು ಬ್ಯಾಂಕಿಗೆ ನಗದೀಕರಣಕ್ಕಾಗಿ ನೀಡಿದಾಗ ಚೆಕ್ ಅಮಾನ್ಯಗೊಂಡಿರುವುದಾಗಿ ಆರೋಪಿಸಿ ದೂರು ದಾಖಲಿಸಿದ್ದು ಇದರ ವಿಚಾರಣೆ ನಡೆಸಿದ ನ್ಯಾಯಾಧೀಶ ಮನು ಬಿ.ಕೆ ಅವರು ಆರೋಪಿ ಶ್ರೀನಿವಾಸ ನಿರಪರಾಧಿ ಎಂದು ಆದೇಶ ನೀಡಿದ್ದಾರೆ.

ಬೆಳ್ತಂಗಡಿಯ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ಮೆಜಿಸ್ಟೇಟ್ ನ್ಯಾಯಾಲಯದಲ್ಲಿ ಈ ಅರ್ಜಿ ವಿಚಾರಣೆ ನಡೆಸಿದ್ದು ಈ ಸಂದರ್ಭದಲ್ಲಿ ಶ್ರೀನಿವಾಸ ಅವರು ನಾನು ದೂರುದಾರರೊಂದಿಗೆ ಯಾವುದೇ ಹಣಕಾಸು ವ್ಯವಹಾರ ನಡೆಸಿರುವುದಿಲ್ಲ ಮತ್ತು ಆತನಿಂದ ಯಾವುದೇ ಸಾಲವನ್ನು ಪಡೆದಿಲ್ಲ ಹಾಗೂ ಸಾಲ ಮರುಪಾವತಿಯ ಬಗ್ಗೆ ಚೆಕ್ಕನ್ನು ಸಹ ನೀಡಿರುವುದಿಲ್ಲ. ಅಲ್ಲದೆ ದೂರುದಾರರು ತನ್ನ ಸಹಿ ಇರುವ ಕಾಲಿ ಚೆಕ್ಕನ್ನು ಮೋಸದಿಂದ ದುರ್ಬಳಕೆ ಮಾಡಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.

ಶ್ರೀನಿವಾಸ್ ಪರ ವಾದ ಮಂಡಿಸಿದ ಕಾರ್ಕಳದ ಹಿರಿಯ ನ್ಯಾಯವಾದಿ ಕೆ ವಿಜೇಂದ್ರ ಕುಮಾರ್ ಅವರು ದೂರುದಾರರು 10 ಲಕ್ಷ ರೂ. ನೀಡುವಷ್ಟರ ಮಟ್ಟಿಗೆ ಆರ್ಥಿಕ ಸ್ಥಿತಿಯನ್ನು ಹೊಂದಿರುವುದಿಲ್ಲ ಎಂಬ ವಿಚಾರವನ್ನು ಮಂಡಿಸಿದ್ದು ಇದನ್ನು ಪುರಸ್ಕರಿಸಿದ ನ್ಯಾಯಾಲಯವು ಆರೋಪಿಯ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿ ನಿರಪರಾಧಿ ಎಂದು ತೀರ್ಪು ನೀಡಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page