28.2 C
Udupi
Thursday, April 9, 2026
spot_img
spot_img
HomeBlogಕಾಂತಾರ-1 ಟ್ರೈಲರ್ ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಘೋಷಣೆ ನೀಡಿದ ಚಿತ್ರತಂಡ

ಕಾಂತಾರ-1 ಟ್ರೈಲರ್ ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಘೋಷಣೆ ನೀಡಿದ ಚಿತ್ರತಂಡ

ಮಣಿಪಾಲ: ಕಾಂತಾರ ಅಧ್ಯಾಯ-1 ಚಿತ್ರದ ಬಿಡುಗಡೆಗೆ ಇನ್ನೇನು ಎರಡೇ ವಾರಗಳು ಮಾತ್ರ ಬಾಕಿ ಇದ್ದು ಆದರೆ ಇದುವರೆಗೆ ಚಿತ್ರ ತಂಡವು ಯಾವುದೇ ದೊಡ್ಡಮಟ್ಟದ ಪ್ರಮೋಷನ್ ಆರಂಭಿಸಿಲ್ಲ. ಆದರೆ ಇದೀಗ ಟ್ರೈಲರ್ ಬಿಡುಗಡೆ ದಿನಾಂಕ ಮತ್ತು ಸಮಯದ ಬಗ್ಗೆ ಅಧಿಕೃತ ಘೋಷಣೆ ಮಾಡಿರುವ ಹೊಂಬಾಳೆ ಫಿಲಂಸ್ ಸೆಪ್ಟೆಂಬರ್ 22ರಂದು ಮಧ್ಯಾಹ್ನ 12:45 ಕ್ಕೆ ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.

ರಿಷಬ್ ಶೆಟ್ಟಿ ಅವರು ಮೊದಲ ಕಾಂತರಾ ಚಿತ್ರದ ಅಮೋಘ ಯಶಸ್ಸಿನ ಬಳಿಕ ಕಾಂತರಾ ಚಾಪ್ಟರ್- 1 ಚಿತ್ರವನ್ನು ಕೈಗೆತ್ತಿಕೊಂಡು ಚಿತ್ರತಂಡವು ಆಗಾಗ ಕೇವಲ ಪೋಸ್ಟರ್ಗಳನ್ನು ಬಿಡುಗಡೆ ಮಾಡಿಕೊಂಡು ಬಂದಿತ್ತು.

ಕನ್ನಡ, ಇಂಗ್ಲಿಷ್ ಸೇರಿದಂತೆ ಏಳು ಭಾಷೆಗಳಲ್ಲಿ ಕಾಂತರಾ ಚಾಪ್ಟರ್ 1 ಚಿತ್ರ ಅಕ್ಟೋಬರ್ 2ರಂದು ಏಕಕಾಲದಲ್ಲಿ ರಿಲೀಸ್ ಆಗಲಿದ್ದು ಆಸ್ಟ್ರೇಲಿಯಾ, ಯುಕೆ, ಅಮೆರಿಕ ಸೇರಿ ವಿಶ್ವದ 30 ದೇಶಗಳಲ್ಲಿ ಕನ್ನಡದ ಈ ಚಿತ್ರ ತೆರೆಗೆ ಬರಲಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page