ವಿಶೇಷ ಶಾಲೆಯಲ್ಲಿ ದೇವರ ಮಕ್ಕಳಿಗೆ ಸೇವಾ ಯೋಜನೆ

ಕಾರ್ಕಳ: ಸಮಾಜಮುಖಿ ಸೇವಾ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ.), ಕಾರ್ಕಳ ತನ್ನ 5ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ವಿಶೇಷ ಸೇವಾ ಕಾರ್ಯಕ್ರಮವನ್ನು ವಿಜೇತ ವಿಶೇಷ ಶಾಲೆ, ಕುಕ್ಕುಂದೂರುನಲ್ಲಿ ಆಯೋಜಿಸಿದೆ.
ಜುಲೈ 12, 2026ರಂದು ಬೆಳಿಗ್ಗೆ 10 ಗಂಟೆಗೆ ಕುಕ್ಕುಂದೂರಿನ ವಿಶೇಷ ಶಾಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ದೇವರ ಮಕ್ಕಳಿಗೆ (ವಿಶೇಷ ಚೇತನ ಮಕ್ಕಳಿಗೆ) ಅಗತ್ಯವಿರುವ ವಸ್ತುಗಳನ್ನು ಸೇವಾ ಯೋಜನೆಯಡಿ ವಿತರಿಸಲಾಗುತ್ತದೆ.
ಸಮಾಜ ಸೇವೆಯ ಮೂಲಕ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಕರಕರಿ ಫ್ರೆಂಡ್ಸ್ ಸೇವಾ ಬಳಗವು ಈ ಬಾರಿಯ ವಾರ್ಷಿಕೋತ್ಸವವನ್ನು ಸಂಭ್ರಮಾಚರಣೆಗೆ ಮಾತ್ರ ಸೀಮಿತಗೊಳಿಸದೇ, ವಿಶೇಷ ಮಕ್ಕಳೊಂದಿಗೆ ಸಮಯ ಕಳೆಯುವ ಹಾಗೂ ಅವರಿಗೆ ಅಗತ್ಯ ಸಹಾಯವನ್ನು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನಂತರ ಉಮೇಶ್ ಕೋಟ್ಯಾನ್ ವಾಮದಪದವು ತಂಡದ ವತಿಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.





















































































