
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಸದ್ಯಕ್ಕೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದ್ದು ಆದರೂ ಗಡಿಭಾಗದ ಹಲವು ನಗರಗಳಿಗೆ ವಿಮಾನಯಾನ ಕಂಪನಿಗಳಾದ ಇಂಡಿಗೋ ಮತ್ತು ಏರ್ ಇಂಡಿಯಾ ವಿಮಾನ ಸಂಚಾರವನ್ನು ರದ್ದುಗೊಳಿಸಿದೆ.
ಶ್ರೀನಗರ, ಜಮ್ಮು, ಅಮೃತ ಸರ, ಚಂಡೀಗಡ, ಜೋಧಪುರ, ಭುಜ್, ಜಾಮನಗರ ಮತ್ತು ರಾಜ್ ಕೋಟ್ ಗೆ ತೆರಳುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ ಎಂದು ಏರ್ ಇಂಡಿಯಾ ಹಾಗೂ ಇಂಡಿಗೋ ವಿಮಾನ ಕಂಪನಿ ತಿಳಿಸಿದೆ.




















