27.9 C
Udupi
Thursday, July 9, 2026
spot_img
spot_img
HomeBlogಉದ್ಯೋಗ ಮೇಳ ಚುನಾವಣಾ ಗಿಮಿಕ್ ಆಗದಿರಲಿ

ಉದ್ಯೋಗ ಮೇಳ ಚುನಾವಣಾ ಗಿಮಿಕ್ ಆಗದಿರಲಿ

“ಯುವ ಜನತೆಯ ನಿರೀಕ್ಷೆ ಹುಸಿಯಾಗದಿರಲಿ” : ಶುಭದ ರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ,

ಉದ್ಯೋಗದ ನಿರೀಕ್ಷೆಯಲ್ಲಿರುವ ನಿರುದ್ಯೋಗಿ ಯುವ ಜನತೆಗೆ ಉದ್ಯೋಗದ ಭರವಸೆ ನೀಡುವ ಸಲುವಾಗಿ ಕಾರ್ಕಳದಲ್ಲಿ ಆಯೋಜಿಸಿರುವ ಉದ್ಯೋಗ‌ ಮೇಳವನ್ನು ಸ್ವಾಗತಿಸುತ್ತೇನೆ ಆದರೆ ಇದೂ ಕೂಡ ಹಿಂದಿನ ಅನೇಕ ಗಿಮಿಕ್ ಗಳಂತೆ ಇನ್ನೊಂದು ಚುನಾವಣಾ ಗಿಮಿಕ್ ಆಗದಿರಲಿ ಎಂದು ಆಶಿಸುತ್ತೇನೆ ಎಂದು ಬ್ಲಾಕ್ ‌ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಅಭಿಪ್ರಾಯ ಪಟ್ಟಿದ್ದಾರೆ.

ಉದ್ಯೋಗದ ನಿರೀಕ್ಷೆಯಲ್ಲಿರುವ ನಿರುದ್ಯೋಗಿ ಯುವ ಜನತೆಗೆ ಸರಕಾರವು ಯುವನಿಧಿ ಗ್ಯಾರಂಟಿಯ ಮೂಲಕ ಆರ್ಥಿಕವಾಗಿ ಸಹಾಯ ಹಸ್ತವನ್ನು‌ ನೀಡಿದೆ, ಉದ್ಯೋಗ ಒದಗಿಸುವ‌ ನಿಟ್ಟಿನಲ್ಲಿ ಅನೇಕ‌ ಸಂಘ ಸಂಸ್ಥೆಗಳು, ಸಮಾಜ ಸಂಘಟನೆಗಳು, ರಾಜಕೀಯ ಪಕ್ಷಗಳು ಉದ್ಯೋಗ ಮೇಳ ನಡೆಸುವುದು ಮತ್ತು ಆ ಮೂಲಕ ಉದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಒಂದು ಉತ್ತಮ ಬೆಳವಣಿಗೆಯಾಗಿದೆ ಮತ್ತು ಅದು ಅನಿವಾರ್ಯ ಕೂಡ ಆದರೆ ಅದು ರಾಜಕೀಯ‌ ಅಥವಾ ಚುನಾವಣಾ ಗಿಮಿಕ್ ಆಗಬಾರದು ಎಂದು ತಿಳಿಸಿದ್ದಾರೆ.

ಈ ಹಿಂದೆ ಶಾಸಕರು ಉದ್ಯೋಗ‌ ಮೇಳ ಮಾಡಿದಾಗ ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ ಎಂಬುದೇ ಅತೀ ದೊಡ್ಡ ಪ್ರಶ್ನೆಯಾಗಿದೆ ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಅದೂ ಅವರ ಅರ್ಹತೆಗೆ ಯೋಗ್ಯವಲ್ಲದ ಉದ್ಯೋಗ ನೀಡಿದ್ದು ಯುವ ಜನತೆಗೆ ಮತ್ತು ಅವರ ಪೋಷಕರಿಗೆ ಇಂದಿಗೂ ಬೇಸರವಿದೆ ಇನ್ನು ಕೆಲವರಿಗೆ ಉದ್ಯೋಗದ ಭರವಸೆ ನೀಡಿ ಅವರ ಡಾಟಾ ಸಂಗ್ರಹಿಸಿ ಕೇವಲ ಪಕ್ಷಕ್ಕಾಗಿ ದುಡಿಸಿದ್ದಾರೆ ಎಂಬ ಆಕ್ರೋಶವಿದೆ ಊರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದವರನ್ನು ಬೆಂಗಳೂರಿನಲ್ಲಿ ಬಟ್ಟೆ ಅಂಗಡಿಗೆ ಸೇರಿಸಿದ್ದೆ ಹಿಂದಿನ ಉದ್ಯೋಗ ಮೇಳದ ಸಾಧನೆ ಎಂದು ಅಲ್ಲಿ‌ ಕೆಲಸ ಬಿಟ್ಟು ಬಂದವರ ಅಭಿಪ್ರಾಯವಾಗಿದೆ ಎಂದರು.

ಶಾಸಕರು ಗಿಮಿಕ್ ಮಾಡುವುದರಲ್ಲಿ ಎತ್ತಿದ ಕೈ ಕಂಚು ಇಲ್ಲದೆ ಕಂಚಿನ‌ ಪ್ರತಿಮೆ ನಿರ್ಮಾಣ, ಅನುದಾನವೇ ಇಲ್ಲದೆ ಜವಳಿ ಪಾರ್ಕ್ ಗುದ್ದಲಿ ಪೂಜೆ, ಹೀಗೆ ಅನೇಕ ಗಿಮಿಕ್ ಗಳ ಸಾಲಿಗೆ ಈ ಉದ್ಯೋಗ ಮೇಳವೂ ಸೇರದಿರಲಿ ಎಂದು ಆಶಿಸುತ್ತೇನೆ ಮತ್ತು‌ ಮೇಳದಲ್ಲಿ ನಿರೀಕ್ಷೆಯಿಂದ ಭಾಗವಹಿಸಿದ ಯುವ ಜನತೆಗೆ ಗರಿಷ್ಠ ಮಟ್ಟದಲ್ಲಿ ಉದ್ಯೋಗದ ಭದ್ರತೆ ಸಿಗಲಿ ಎಂದು ಶುಭ ಕೋರುತ್ತೇನೆ ಎಂದು ಪತ್ರಿಕಾ ‌ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page