
ದಿನಾಂಕ 08.09.2025 ರಂದು ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ಸಂಯೋಜನೆಯೊಂದಿಗೆ ಉದ್ಯಮಶೀಲತೆ ಅಭಿವೃದ್ದಿ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ವಾರಿಜ ವಿ ಕಾಮತ್ ಮತ್ತು ರೇಷ್ಮಾ ಇವರು ಭಾಗವಹಿಸಿದ್ದರು. ವಾರಿಜ ವಿ ಕಾಮತ್ ವಿದ್ಯಾರ್ಥಿಗಳಿಗೆ ಉದ್ಯಮವನ್ನು ಹೇಗೆ ಪ್ರಾರಂಭ ಮಾಡಬಹುದು ಮತ್ತು ಅವರ ಉದ್ಯಮದ ಬಗ್ಗೆ ಮಾತನಾಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರೇಷ್ಮಾ ಇವರು ಪ್ಯಾಷನ್ ಡಿಸೈನ್, ಟೈಲರಿಂಗ್ ಮತ್ತು ಸ್ವಂತ ಉದ್ಯಮ ಫಿನಾಯಿಲ್ ತಯಾರು ಮಾಡುವುದರ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ್ ರೈ ಕೆ ಇವರು ವಹಿಸಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಮಾತನಾಡಿದರು. ಡಾ ಚಂದ್ರಾವತಿ, ವಾಣಿಜ್ಯಶಾಸ್ತ್ರ ಮುಖ್ಯಸ್ಥರು ಸ್ವಾಗತಿಸಿ, ಭವಿಷ್ಯ ತೃತೀಯ ಬಿಕಾಂ ಎ ವಂದಿಸಿದರು. ಕುಮಾರಿ ದಿವ್ಯ ದೇವಾಡಿಗ, ತೃತೀಯ ಬಿಕಾಂ ಎ ಕಾರ್ಯಕ್ರಮ ನಿರೂಪಿಸಿದರು. ಐಕ್ಯೂಎಸಿ ಸಂಚಾಲಕರಾದ ವಿನಯ್ ಪ್ರಾಸ್ಥಾವಿಕ ಮಾತುಗಳನ್ನು ಆಡಿದರು. ವಾಣಿಜ್ಯ ಪ್ರಾಧ್ಯಾಪಕರಾದ ಚೇತನಾ ಬಿ., ಜ್ಯೋತಿ ಎಲ್ ಜನ್ನೆ ಉಪಸ್ಥಿತರಿದ್ದರು. 108 ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದರು.