
ಉಡುಪಿ : ಬೈಕ್ ಗೆ ಪೆಟ್ರೋಲ್ ಹಾಕಿ ಹಣ ಕೇಳಿದರೆ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ. ಇಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಾಚರಿಸುವ ಪೆಟ್ರೋಲ್ ಬಂಕ್ ನಲ್ಲಿ ಈ ಘಟನೆ ವರದಿಯಾಗಿದೆ.
ಕುಂದಾಪುರದ ಕರ್ಕುಂಜೆ ಗ್ರಾಮದ ನೆಂಪು ಎಂಬಲ್ಲಿ ಸೌಪರ್ಣಿಕಾ ಪೆಟ್ರೋಲ್ ಬಂಕ್ ಇದೆ. ಬೆಳಗಿನ ಜಾವ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ, ನೂರು ರೂಪಾಯಿ ಪೆಟ್ರೋಲ್ ಹಾಕಿಸಿದ್ದು ಹಣ ಕೇಳಿದಾಗ ಹಲ್ಲೆ ನಡೆಸಿದ್ದಾರೆ. ಆರೋಪಿಗಳನ್ನು ಶಬರೀಶ, ರಾಘವೇಂದ್ರ ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ಸೇಲ್ಸ್ ಮ್ಯಾನ್ ಕೆಂಚಪ್ಪ ದೂರು ನೀಡಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













