
ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣದ ಕುರಿತು ಮಾಹಿತಿ ನೀಡಿದ ಎಸ್ ಪಿ ಡಾ. ಅರುಣ್ ಅವರು ಈ ಕೃತ್ಯ ಎಸಗಿದ ವ್ಯಕ್ತಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು ಆರೋಪಿಯು ಕನ್ನಡ ಹಾಗೂ ತುಳು ಭಾಷೆಯಲ್ಲಿ ಭಿಕ್ಷೆ ಬೇಡುತ್ತಿದ್ದು ಆಟವಾಡುತ್ತಿದ್ದ ಮಗುವಿಗೆ ಕೈ ಸನ್ನೆ ಮೂಲಕ ಚಾಕ್ಲೆಟ್ ಆಸೆ ತೋರಿಸಿ ತನ್ನತ್ತ ಕರೆದುಕೊಂಡಿದ್ದಾನೆ. ಬಳಿಕ ಮಗುವನ್ನು ಪುಸಲಾಯಿಸಿ ಕಾಲುದಾರಿಯಲ್ಲಿ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದಾನೆ. ಖಾಸಗಿ ಅಂಗಗಳನ್ನು ಮುಟ್ಟಿದಾಗ ಮಗು ಕಿರುಚಾಡಿದ್ದು ಕೂಡಲೇ ಆರೋಪಿಯು ಪರಾರಿಯಾಗಿದ್ದಾನೆ ಎಂದು ಹೇಳಿದರು.
ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಸಾರ್ವಜನಿಕರು ನಗರ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.





















