27.4 C
Udupi
Monday, May 4, 2026
spot_img
spot_img
HomeBlogಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡುವ ಪರೋಪಕಾರಿಗಳಿಗೆ 25,000ರೂ. ಬಹುಮಾನ ನೀಡಲಾಗುವುದು: ಕೇಂದ್ರ ಸಚಿವ ನಿತಿನ್‌...

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡುವ ಪರೋಪಕಾರಿಗಳಿಗೆ 25,000ರೂ. ಬಹುಮಾನ ನೀಡಲಾಗುವುದು: ಕೇಂದ್ರ ಸಚಿವ ನಿತಿನ್‌ ಗಡ್ಕರಿ

ಹೊಸದಿಲ್ಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ನಾಗಪುರದಲ್ಲಿ ರಸ್ತೆ ಸುರಕ್ಷ ಕಾರ್ಯಕ್ರಮದಲ್ಲಿ ಮಾತನಾಡಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡುವ ಪರೋಪಕಾರಿಗಳಿಗೆ 25,000ರೂ. ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ಅಪಘಾತವಾದಾಗ ಮೊದಲ 1 ಗಂಟೆ ನಿರ್ಣಾಯಕವಾಗಿದ್ದು, ಆ ಅವಧಿಯಲ್ಲಿ ಸಂತ್ರಸ್ತರನ್ನು ಆಸ್ಪತ್ರೆಗಳಿಗೆ ಸಾಗಿಸುವ ವ್ಯಕ್ತಿಗೆ ಈಗ ನೀಡುತ್ತಿರುವ 5 ಸಾವಿರ ರೂ. ಬಹುಮಾನ ಸಾಲುತ್ತಿಲ್ಲವಾದ್ದರಿಂದ ಇವರಿಗೆ 25 ಸಾವಿರ ರೂ. ನೀಡಲಾಗುವುದು. ಅಪಘಾತಗಳಲ್ಲಿ ಗಾಯಗೊಂಡವರಿಗೆ ಮೊದಲ 7 ದಿನಗಳವ­ರೆಗೆ 1.5 ಲಕ್ಷ ರೂ.ವರೆಗಿನ ಆಸ್ಪತ್ರೆ ವೆಚ್ಚವನ್ನು ಸಹ ಕೇಂದ್ರ ಸರಕಾರ ಭರಿಸಲಿದೆ. ಇದು ರಾಜ್ಯ ಹೆದ್ದಾರಿ­ಗಳಲ್ಲಿ ಗಾಯಗೊಂಡವರಿಗೂ ಅನ್ವಯಿಸಲಿದೆ ಎಂದು ಮಾಹಿತಿ ನೀಡಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page